ವೀರಾಜಪೇಟೆ, ಜ. 20 : ರಾಜ್ಯ ರಣಜಿ ತಂಡದ ಮಾಜಿ ಆಟಗಾರ ಹಾಗೂ ಬಿಗ್‍ಬಾಸ್ ಸೀಸನ್-3 ಯ ಸ್ಪರ್ಧಿಯಾಗಿದ್ದ ಎನ್.ಸಿ.ಅಯ್ಯಪ್ಪ ಹಾಗೂ ನಟಿ ಅನುಷಾ ಪೂವಮ್ಮ ಅವರು ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ವೀರಾಜಪೇಟೆಯ ಕೊಡವ ಸಮಾಜದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಎನ್.ಸಿ. ಅಯ್ಯಪ್ಪ ಅವರ ಸಹೋದರಿ ಖ್ಯಾತ ಚಿತ್ರನಟಿ ಪ್ರೇಮಾ ಭಾಗವಹಿಸಿದ್ದರು. ಶನಿವಾರ ರಾತ್ರಿ ಆರತಕ್ಷತೆಯು ನಡೆದಿತ್ತು.

ನೆರವಂಡ ಸಿ.ಅಯ್ಯಪ್ಪ ಜಿಲ್ಲೆಯ ಕುಂಬಳದಾಳು ಗ್ರಾಮದ ನೆರವಂಡ ಚೆಟ್ಟಿಚಾ ಹಾಗೂ ಕಾವೇರಿ ದಂಪತಿಯ ಪುತ್ರ. ಅನುಷಾ ಇಲ್ಲಿನ ಕೆದಮುಳ್ಳೂರು ಗ್ರಾಮದ ಮಾಳೇಟಿರ ದಿ.ಚಿಣ್ಣಪ್ಪ ಹಾಗೂ ಪುಷ್ಪಾ ದಂಪತಿಯ ಪುತ್ರಿ.

ಕಳೆದ ಎರಡು ವರ್ಷಗಳÀ ಹಿಂದೆ ಎನ್.ಸಿ.ಅಯ್ಯಪ್ಪ ಹಾಗೂ ಅನುಷಾ ಪೂವಮ್ಮ ನಡುವೆ ಪರಿಚಯವಾಗಿ ಸ್ನೇಹವಾಗಿತ್ತು ಎನ್ನಲಾಗಿದೆ. 2018 ರಲ್ಲಿ ಇಬ್ಬರ ನಿಶ್ಚಿತಾರ್ಥವು ಬೆಂಗಳೂರಿನಲ್ಲಿ ನಡೆದಿತ್ತು.