ವೀರಾಜಪೇಟೆ, ಜ. 20: ವೀರಾಜಪೇಟೆಯ ಬಿಟ್ಟಂಗಾಲದ ರೋಟರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಹರ್ಷಿ ದೇವಮ್ಮಗೆ ರಾಜ್ಯ ಮಟ್ಟದ ನಾಲ್ಕನೇ ಓ ಕೆ ಎ ಎ ಮುಕ್ತ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ಬ್ಲಾಕ್ ಬೆಲ್ಟ್ ಜೊತೆಗೆ ಗ್ರೂಪ್‍ನ ಕತಾ, ಕುಮಿತೆ ಹಾಗೂ ಟೀಂ ಕತಾದಲ್ಲಿ ಪ್ರಥಮ ಸ್ಥಾನಗಳಿಸಿ ಮೂರು ಚಿನ್ನದ ಪದಕಗಳನ್ನು ಗಳಿಸಿದ್ದಾಳೆ.
ಮೈಸೂರಿನ ಶ್ರೀರಾಂಪುರದಲ್ಲಿ ಈಚೆಗೆ ನಡೆದ ರಾಜ್ಯ ಮಟ್ಟದ ಕರಾಟೆ ಪಂದ್ಯಾಟದಲ್ಲಿ ಹರ್ಷಿ ಪದಕಗಳನ್ನು ಗಳಿಸಿದ್ದು ವೀರಾಜಪೇಟೆಯ ಗೋಜುರಿಯೋ ಕರಾಟೆ ಶಾಲೆಯ ಎಂ.ಬಿ.ಚಂದ್ರನ್ ತರಬೇತಿ ನೀಡಿದ್ದರು.
ಹರ್ಷಿದೇವಮ್ಮ ವೀರಾಜಪೇಟೆ ಸುಭಾಶ್‍ನಗರದ ಅಣ್ಣಾಳಮಾಡ ಡಿ.ಸುರೇಶ್ ಸುಬ್ಬಯ್ಯ ಹಾಗೂ ವಕೀಲೆ ತಾರಾ ಸುಬ್ಬಯ್ಯ ದಂಪತಿ ಪುತ್ರಿ.