ಸೋಮವಾರಪೇಟೆ, ಜ. 18: ಜನಪರ ಜನಾಂದೋಲನದ ಮೂಲಕ ಕೊಡಗು ನಿರ್ಮಾಣದ ಗುರಿಯೊಂದಿಗೆ ಸಮಾನ ಮನಸ್ಕರ ವೇದಿಕೆ ಅಸ್ತಿತ್ವಕ್ಕೆ ಬಂದಿದೆ ಎಂದು ವೇದಿಕೆಯ ಜಿಲ್ಲಾ ಸಂಚಾಲಕ ವಿ.ಪಿ. ಶಶಿಧರ್ ಹೇಳಿದರು. ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಸಮಾನ ಮನಸ್ಕ ಚಿಂತಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದೇಶದ ಸಂವಿಧಾನವೇ ಶ್ರೇಷ್ಠವಾಗಿದೆ. ಇದರ ಅಡಿಯಲ್ಲಿಯೇ ಬದುಕಬೇಕು. ಎಲ್ಲಾ ಧರ್ಮದವರನ್ನು ಬದುಕಲು ಬಿಡಬೇಕು ಎಂಬ ಸಂದೇಶದೊಂದಿಗೆÉ ಎಲ್ಲಾ ಜಾತ್ಯತೀತ ಪಕ್ಷಗಳಲ್ಲಿನ ಸಮಾನ ಮನಷ್ಕರು, ರಾಜಕೀಯ ರಹಿತವಾಗಿ ಸಂಘಟಿತರಾಗಲಿದ್ದಾರೆ ಎಂದರು.

ಜಿಲ್ಲೆಯಲ್ಲಿ ಸಂಘ ಪರಿವಾರದವರ ದಬ್ಬಾಳಿಕೆ ಮಿತಿ ಮೀರಿದೆ ಎಂದು ಸಿ.ಪಿ.ಐ. (ಎಂ.ಎಲ್.)ನ ರಾಜ್ಯ ಸಮಿತಿ ಸದಸ್ಯ ಡಿ.ಎಸ್. ನಿರ್ವಾಣಪ್ಪ ದೂರಿದರು.

ಸಭೆಯಲ್ಲಿ ಜಿ.ಪಂ. ಮಾಜಿ ಅಧ್ಯಕ್ಷೆ ಹೆಚ್.ಬಿ. ಜಯಮ್ಮ, ಕಾರ್ಮಿಕ ಮುಖಂಡ ಹೆಚ್.ಬಿ. ಸೋಮಪ್ಪ, ದಲಿತಪರ ಹೋರಾಟಗಾರ ಜಯಪ್ಪ ಹಾನಗಲ್, ಪ.ಪಂ. ಸದಸ್ಯ ಉದಯಶಂಕರ್, ಕಾಂಗ್ರೆಸ್ ಮುಖಂಡ ಕೆ.ಎ. ಆದಂ, ಆಲಿಂಖಾನ್, ಬಿ.ಈ. ಜಯೇಂದ್ರ, ಇಸಾಕ್‍ಖಾನ್, ಔರಂಗಜೇಬ್ ಮತ್ತಿತರರು ಉಪಸ್ಥಿತರಿದ್ದರು.