ನಾಪೆÇೀಕ್ಲು, ಜ. 17: ಡಿ. 22 ಮತ್ತು 23 ರಂದು ನಾಪೆÇೀಕ್ಲುವಿನ ಸರಕಾರಿ ಪ್ರೌಢಶಾಲಾ ವಿಭಾಗದಲ್ಲಿ ನಡೆದ 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರೂ. 10,22,860 ಖರ್ಚಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ತಿಳಿಸಿದರು.
ನಾಪೆÇೀಕ್ಲು ಪ್ರೌಢಶಾಲೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಮತ್ತು ಸಾಹಿತ್ಯ ಸಮ್ಮೇಳನದ ಆಹಾರ ಸಮಿತಿ ಅಧ್ಯಕ್ಷ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಲೆಕ್ಕಪತ್ರ ಮಂಡನಾ ಸಭೆಯಲ್ಲಿ ಅವರು ಮಾತನಾಡಿದರು. ತಾಲೂಕು ಆರ್.ಎಂ.ಸಿ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ ಹಿರಿಯರ ಸಹಕಾರದೊಂದಿಗೆ ಊಟದ ಖರ್ಚು ರೂ. 2 ಲಕ್ಷ, ವಾದ್ಯ, ಕಾಪಳ ನೃತ್ಯ, ಅಡುಗೆಗೆ ನೀರು ಸೇರಿದಂತೆ ಇತರ ಖರ್ಚು ರೂ. 22,860 ಗಳನ್ನು ದಾನಿಗಳ ಸಹಕಾರದಿಂದ ಸಂಗ್ರಹಿಸಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಉಳಿದಂತೆ ವೇದಿಕೆ, ಅಧ್ಯಕ್ಷರ ಮೆರವಣಿಗೆ, ನೆನಪಿನ ಕಾಣಿಕೆ, ಸನ್ಮಾನ, ಇನ್ನಿತರ ಎಲ್ಲಾ ವೆಚ್ಚಗಳು ಸೇರಿ 8 ಲಕ್ಷ ರೂ. ವೆಚ್ಚವಾಗಿದೆ. ಒಟ್ಟು ಸಮ್ಮೇಳನ ಖರ್ಚು ರೂ. 10,22,860 ಗಳಾಗಿದೆ ಎಂದು ಮಾಹಿತಿ ನೀಡಿದರು. ಸರಕಾರದಿಂದ ರೂ. 5 ಲಕ್ಷ ಮಾತ್ರ ಈ ಕಾರ್ಯಕ್ರಮಕ್ಕೆ ದೊರೆಯಲಿದೆ ಎಂದು ಸ್ಪಷ್ಟಪಡಿಸಿದರು.