ಮಡಿಕೇರಿ, ಜ. 17: ಶಬರಿಮಲೆ ಅಯ್ಯಪ್ಪ ದೇವಾಲಯದ ವಿವಾದವನ್ನು ನೆಪ ಮಾಡಿಕೊಂಡು ಕೆಲವು ಸಂಘಟನೆಗಳ ಕಾರ್ಯಕರ್ತರು ವಿನಾ ಕಾರಣ ಗೊಂದಲ ಸೃಷ್ಟಿಸಿ ಅಶಾಂತಿ ಮೂಡಿಸಲು ಯತ್ನಿಸುತ್ತಿದ್ದಾರೆ ಎಂದು ಭಾರತ ಕಮ್ಯುನಿಸ್ಟ್ ಪP್ಷÀದ ಕಾರ್ಯದರ್ಶಿ ಡಾ. ಐ.ಆರ್. ದುರ್ಗಾಪ್ರಸಾದ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇತ್ತೀಚೆಗೆ ಸಿದ್ದಾಪುರದಲ್ಲಿ ಕೆಲವು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಮುಗ್ಧ ಅಯ್ಯಪ್ಪ ಭಕ್ತರನ್ನು ಮುಂದಿಟ್ಟುಕೊಂಡು ಮೆರವಣಿಗೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯ್ ವಿಜಯರವರ ವಿರುದ್ಧ ಪ್ರಚೋದನಾತ್ಮಕ ಘೋಷಣೆಗಳನ್ನು ಕೂಗಿದ್ದಾರೆ. ಅಲ್ಲದೆ ಮೆರವಣಿಗೆ ನಂತರ ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಕಮ್ಯೂನಿಸ್ಟ್ ಪಕ್ಷದ ಬಾವುಟವನ್ನು ಸುಟ್ಟಿದ್ದಾರೆ ಎಂದು ಆರೋಪಿಸಿದರು. ಸಂಘ ಪರಿವಾರದÀ ಕಾರ್ಯಕರ್ತರ ವರ್ತನೆಯನ್ನು ಪಕ್ಷ ಖಂಡಿಸುವದಾಗಿ ತಿಳಿಸಿದರು.

ಕೇರಳದ ಅಯ್ಯಪ್ಪ ದೇವಾಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯಕ್ಕೆ ಹೋದವರು ಕಮ್ಯೂನಿಸ್ಟ್‍ರಲ್ಲ ಎಂದು ಸ್ಪಷ್ಟಪಡಿಸಿದ ಅವರು, ನ್ಯಾಯಾಲಯದ ತೀರ್ಪನ್ನು ಅನುಷ್ಠಾನಕ್ಕೆ ತರಲೇಬೇಕು ಎನ್ನುವ ತನ್ನ ಸಾಂವಿಧಾನಿಕ ಕರ್ತವ್ಯವನ್ನು ಪಿಣರಾಯ್‍ರವರ ನೇತೃತ್ವದ ಸರ್ಕಾರ ಮಾಡುತ್ತಿದೆ ಎಂದರು. ಕೋರ್ಟ್ ತೀರ್ಪು ಹೊರಬಂದ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆ ಹಾಗೂ ಬಿಜೆಪಿ ಪಕ್ಷದ ನಾಯಕರು ಸ್ವಾಗತಿಸಿದರು. ಆದರೆ ಇಂದು ಜನ ಸಾಮಾನ್ಯರ ಮತೀಯ ಭಾವನೆಗಳನ್ನು ಕೆರಳಿಸಿ ರಾಜಕೀಯ ಲಾಭಗಳಿಸಲು ಕೇರಳದಲ್ಲಿ ಗಲಭೆ ಸೃಷ್ಠಿಸುತ್ತಿದ್ದಾರೆ ಎಂದು ದುರ್ಗಾಪ್ರಸಾದ್ ಆರೋಪಿಸಿದರು.

ದ್ವಿಮುಖ ಬಿಜೆಪಿ: ಡಾ.ಮಾದವ್ ಗಾಡ್ಗೀಳ್ ವರದಿ ಹಾಗೂ ಡಾ. ಕಸ್ತೂರಿರಂಗನ್ ವರದಿಯನ್ನು ಕೊಡಗಿನ ಜನತೆ ಕಟುವಾಗಿ ವಿರೋಧಿಸಿ ಸಾಕಷ್ಟು ಹೋರಾಟಗಳನ್ನು ನಡೆಸಿದ್ದಾರೆ. ಹೋರಾಟಗಳಲ್ಲಿ ಭಾರತೀಯ ಜನತಾ ಪಕ್ಷದವರು ಮುಂಚೂಣಿಯಲಿ ನಿಂತು ತಾವೇ ಹೋರಾಟಗಾರರು ಎಂಬಂತೆ ನಟಿಸಿದ್ದರು. ಅಲ್ಲದೆ ಪಕ್ಷ ಅಧಿಕಾರಕ್ಕೆ ಬಂದರೆ ವರದಿ ಅನುಷ್ಠಾನಕ್ಕೆ ತರುವದಿಲ್ಲ ಎಂದು ಭರವಸೆ ನೀಡಿದ್ದ ಪಕ್ಷ, ದೇಶದ ಸರ್ವೋಚ್ಛ ನ್ಯಾಯಾಲಯದಲ್ಲಿ ಅಫಿಡಿವಿಟ್ ಮಂಡಿಸಿ ಕಸ್ತೂರಿರಂಗನ್ ವರದಿ ಅನುಷ್ಠಾನಕ್ಕೆ ತರಲು ಮುಂದಾಗಿರುವದು ವಿಷಾದನೀಯ ಎಂದು ಟೀಕಿಸಿದರು. ಬಿಜೆಪಿಯ ದ್ವಿಮುಖ ನೀತಿಯ ಬಗ್ಗೆ ಜಿಲ್ಲೆಯ ಜನ ಜಾಗೃತರಾಗಬೇಕೆಂದರು

ಗೋಷ್ಠಿಯಲ್ಲಿ ಪಕ್ಷದ ಸದಸ್ಯ ಶಿವಪ್ಪ ಹಾಗೂ ಪ್ರಮುಖ ವೈ.ಕೆ. ಗಣೇಶ್ ಉಪಸ್ಥಿತರಿದ್ದರು.