ಮಡಿಕೇರಿ, ಜ. 17: ಕಳೆದ 11 ವರ್ಷಗಳಿಂದ ಜಿಲ್ಲೆಯ ಮುಸ್ಲಿಂ ಸಮುದಾಯದ ಅನಾಥ ಹಾಗೂ ಬಡ ಕನ್ಯೆಯರ ಸಾಮೂಹಿಕ ವಿವಾಹವನ್ನು ನಡೆಸಿಕೊಂಡು ಬರುತ್ತಿರುವ ಅಲ್ ಅಮೀನ್ ಕೊಡಗು ಜಿಲ್ಲಾ ಸಮಿತಿಯು ಈ ಬಾರಿ ಏಪ್ರಿಲ್ 21 ರಂದು 25 ಜೋಡಿ ಕನ್ಯೆಯರ ಸಾಮೂಹಿಕ ವಿವಾಹ ನಡೆಸಿಕೊಡಲು ಅರ್ಹರಿಂದ ಅರ್ಜಿಯನ್ನು ಕರೆದಿದೆ.
ಬಡತನ ರೇಖೆಗಿಂತ ಕೆಳಗಿರುವ 18 ವರ್ಷ ಮೇಲ್ಪಟ್ಟ ಕನ್ಯೆಯರ ಪೋಷಕರು ಈ ಕೆಳಕಂಡ ಸ್ಥಳಗಳಿಂದ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ ಮಾರ್ಚ್ 15 ರೊಳಗೆ ಸಂಸ್ಥೆಯ ಕಚೇರಿಗೆ ತಲಪಿಸುವಂತೆ ಕೋರಲಾಗಿದೆ. ವಿವಾಹ ಸಂದರ್ಭ ವದುವಿಗೆ 5 ಪವನಿನ ಚಿನ್ನಾಭರಣ, ಉಡುಪು, ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಾರ್ವಜನಿಕರಿಗೆ ಮಧ್ಯಾಹ್ನದ ಭೋಜನದ ವ್ಯವಸ್ಥೆ ಮಾಡಲಾಗುವದು. ಅರ್ಜಿ ನಮೂನೆ ದೊರಕುವ ಸ್ಥಳದ ವಿವರ: ಮಡಿಕೇರಿ: ಫೈವ್ ಸ್ಟಾರ್ ವಾಚ್ ಅಂಗಡಿ, ಖಾಸಗಿ ಬಸ್ ನಿಲ್ದಾಣ ಮೊ. 9844534743, ವೀರಾಜಪೇಟೆ: ನೌಫಲ್, ಗ್ರೀನ್ ಲ್ಯಾಂಡ್ ಬನಾನಾ, ಮಟನ್ ಮಾರ್ಕೆಟ್ ರಸ್ತೆ ಮೊ. 9035186511, ಸೋಮವಾರಪೇಟೆ: ಬಶೀರ್ ವಾಕನ್ ವೇರ್, ಕಾವೇರಿ ಕಾಂಪ್ಲೆಕ್ಸ್, ಖಾಸಗಿ ಬಸ್ ನಿಲ್ದಾಣ ಮೊ. 9448585556, ಗೋಣಿಕೊಪ್ಪಲು: ಬಶೀರ್ ಹಾಜಿ, ಟೈಂ ವಿಷನ್ ವಾಚ್ ಅಂಗಡಿ, ಮೊ. 8289887668, ನೆಲ್ಲಿಹುದಿಕೇರಿ: ಎ.ಕೆ. ಹಕೀಂ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಮೊ. 9448354568, ಮೂರ್ನಾಡು: ಕ್ವಾಲಿಟಿ ಕೋಲ್ಡ್ ಸ್ಟೋರ್ಸ್, ಬಸ್ ನಿಲ್ದಾಣ, ದೂ. 08272-232557, ಸುಂಟಿಕೊಪ್ಪ: ಆರ್. ಹಸನ್ ಕಂಞ ಹಾಜಿ, ಕೆಇಬಿ ಹತ್ತಿರ, 2ನೇ ಬ್ಲಾಕ್, ಮೊ. 9886863045, ನಾಪೋಕ್ಲು: ಟಿ.ಎ. ಹನೀಫಾ, ಸ್ಟಾರ್ ಸರ್ವೀಸ್ ಸ್ಟೇಷನ್, ಮೊ. 9980159825, ಕೊಟ್ಟಮುಡಿ: ಪಿ.ಎಂ. ಹುಸೇನ್, (ಉಂದಾರು), ಮೊ. 9900750112, ಕುಶಾಲನಗರ: ಕೆ.ಎ. ರಹಮುಲ್ಲಾ, ಬೇಬಾ ಡ್ರೆಸಸ್, ಗಿರಿಜಾ ಕಾಂಪ್ಲೆಕ್ಸ್, ರಥಬೀದಿ, ಮೊ. 9900500184, ಕೊಡ್ಲಿಪೇಟೆ: ಸುಲೈಮಾನ್, ಅಧ್ಯಕ್ಷರು, ಮಸ್ಜಿದನ್ನೂರ್, ಮೊ. 9448721203.