ಮಡಿಕೇರಿ, ಜ. 17: ಭಾರತ ಹಾಕಿ ತಂಡದ ಆಯ್ಕೆಗೆ ಸಂಬಂಧಿಸಿದಂತೆ ಹಾಕಿ ಇಂಡಿಯಾದ ನಿಯೋಜಿತರಲ್ಲಿ ತಂಡದ ಮಾಜಿ ನಾಯಕ ಸರ್ದಾರ್ ಸಿಂಗ್ ಅವರು ಸೇರ್ಪಡೆ ಗೊಂಡಿದ್ದಾರೆ. 13 ಮಂದಿ ಆಯ್ಕೆ ದಾರರನ್ನು ಒಳಗೊಂಡ ಈ ತಂಡದ ನೇತೃತ್ವವನ್ನು ಕೊಡಗಿನವರಾದ ತಂಡದ ಮಾಜಿ ಆಟಗಾರ ಬಿ.ಪಿ. ಗೋವಿಂದ ಅವರು ವಹಿಸಿದ್ದಾರೆ.

ಆಯ್ಕೆ ತಂಡದಲ್ಲಿ ಕೊಡಗಿನವರಾದ ಮತ್ತೋರ್ವ ಮಾಜಿ ಅಂತರರಾಷ್ಟ್ರೀಯ ಆಟಗಾರ ಒಲಂಪಿಯನ್ ಡಾ. ಅಂಜಪರವಂಡ ಬಿ. ಸುಬ್ಬಯ್ಯ ಅವರ ಸೇರಿದ್ದಾರೆ. ತಂಡದ ಇತರ ಸದಸ್ಯರುಗಳಾಗಿ ಹರ್ಬೀಂದರ್ ಸಿಂಗ್, ಸೈಯ್ಯದ್ ಆಲಿ, ಆರ್.ಪಿ. ಸಿಂಗ್, ರಜನೀಶ್ ಮಿಶ್ರಾ, ಜಾಯ್ ದೀಪ್‍ಕೌರ್, ಸುರೇಂದರ್ ಕೌರ್, ಅಸುಂತಲಾಕ್ರಾ, ಡೇವಿಡ್‍ಜಾನ್ ಸೇರಿದಂತೆ ಪುರುಷರ ಹಾಗೂ ಮಹಿಳಾ ತಂಡದ ಮುಖ್ಯ ಕೋಚ್‍ಗಳಿದ್ದಾರೆ.