ಮಡಿಕೇರಿ, ಜ. 17: ಸಹೋದರನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ನ್ಯಾಯಾಲಯ ದಂಡ ಸಹಿತ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ
ಬಾಚಮಾಡ ಎ. ಸುಂದರ ಎಂಬವರು ಮುತ್ತಮ್ಮಯ್ಯ ಎಂಬವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿರುವ ಜಿಲ್ಲಾ ಪ್ರಥಮ ಅಡಿಷನಲ್ ಹಾಗೂ ಸೆಷನ್ಸ್ ನ್ಯಾಯಾಲಯ ಆರೋಪಿಗೆ ಸೆಕ್ಷನ್ 324ರಡಿ 2 ವರ್ಷ ಸಜೆ ಹಾಗೂ ರೂ. 5 ಸಾವಿರ ದಂಡ, ದಂಡ ತೆರಲು ತಪ್ಪಿದಲ್ಲಿ 2 ತಿಂಗಳ ಅಧಿಕ ಸಜೆ, ಸೆಕ್ಷನ್ 307ರಡಿ 6 ವರ್ಷ ಸಜೆ ಹಾಗೂ ರೂ. 15 ಸಾವಿರ ದಂಡ, ದಂಡ ತೆರಲು ತಪ್ಪಿದಲ್ಲಿ 4 ತಿಂಗಳ ಅಧಿಕ ಸಜೆ ಮತ್ತು ಸೆಕ್ಷನ್ 506ರಡಿ 1 ವರ್ಷ ಸಜೆ ಹಾಗೂ ರೂ. 3 ಸಾವಿರ ದಂಡ, ದಂಡ ತೆರಲು ತಪ್ಪಿದಲ್ಲಿ 1 ತಿಂಗಳ ಅಧಿಕ ಸಜೆ ವಿಧಿಸಿ ತೀರ್ಪು ನೀಡಿದೆ.
ಈ ಎಲ್ಲ ಶಿಕ್ಷೆಗಳನ್ನು ಏಕಕಾಲದಲ್ಲಿ ಅನುಭವಿಸುವಂತೆ ತೀರ್ಪು ನೀಡಿರುವ ನ್ಯಾಯಾಧೀಶ ಡಿ. ಪವನೇಶ್ ಅವರು, ಪಾವತಿಯಾಗುವ ದಂಡದ ಹಣದಲ್ಲಿ ರೂ. 17,500ನ್ನು ಮುತ್ತಮ್ಮಯ್ಯ ಅವರಿಗೆ ರೂ. 2500ನ್ನು ಮತ್ತೋರ್ವ ಗಾಯಾಳು ರತ್ನಮ್ಮ ಅವರುಗಳಿಗೆ ಪರಿಹಾರವಾಗಿ ನೀಡುವಂತೆ ಆದೇಶಿಸಿದ್ದಾರೆ.