ಕುಶಾಲನಗರ, ಜ. 17: ಕುಶಾಲನಗರದ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್ ಅಶ್ರಯದಲ್ಲಿ ತಾ. 19 ರಂದು ದಂತ ಚಿಕಿತ್ಸಾ ಉಚಿತ ಶಿಬಿರ ಹಮ್ಮಿಕೊಳ್ಳಲಾಗಿದೆ.ಸ್ಥಳೀಯ ವಾಸವಿ ಮಹಲ್ ಹಿಂಭಾಗದ ಸಭಾಂಗಣದಲ್ಲಿ ಬೆಳಿಗ್ಗೆ 10 ರಿಂದ ಸಂಜೆ 3 ರವರೆಗೆ ತಪಾಸಣೆ ನಡೆಯಲಿದೆ. ಕೊಡಗು ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ನುರಿತ ವೈದ್ಯರುಗಳು ಶಿಬಿರದಲ್ಲಿ ಪಾಲ್ಗೊಂಡು ಚಿಕಿತ್ಸೆ ನೀಡಲಿದ್ದಾರೆ.ಶಿಬಿರದಲ್ಲಿ ಹುಳುಕು ಹಲ್ಲು ತುಂಬಿಸುವದು, ಹಲ್ಲು ಸ್ವಚ್ಛಗೊಳಿಸುವದು, ಕೃತಕ ದಂತ ಜೋಡಣೆ ಸೇರಿದಂತೆ ವಕ್ರದಂತ, ವಸಡು ರೋಗ, ಬಾಯಿಯ ಅರ್ಭುದ ರೋಗ, ಎಂಡೋಡಾಂಟಿಕ್ಸ್ ತಪಾಸಣೆ ನಡೆಸಲಾಗುವದು. ಫಲಾನುಭವಿಗಳಿಗೆ ಔಷಧಿಗಳನ್ನು ಉಚಿತವಾಗಿ ನೀಡಲಾಗುವದು ಎಂದು ಸಂಘದ ಅಧ್ಯಕ್ಷ ಬಿ.ಎಲ್. ಸತ್ಯನಾರಾಯಣ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ 9036888335, 9448373295 ಸಂಪರ್ಕಿಸುವಂತೆ ಕೋರಲಾಗಿದೆ.