ಮಡಿಕೇರಿ, ಜ. 16: ಯುವ ಜನಾಂಗ ಹೆಚ್ಚು ಉತ್ಸಾಹದಿಂದ ಭಾಗವಹಿಸಿ ಹಿಂದಿನ ಜಾನಪದ ಸಾಹಿತ್ಯವನ್ನು ಕರಗತ ಮಾಡಿಕೊಂಡು ಸಮಾಜಕ್ಕೆ ಪರಿಚಯಿಸುವ ಕೆಲಸವಾಗಬೇಕು ಹಾಗೂ ವಿದ್ಯಾರ್ಥಿ ದಿಸೆಯಲ್ಲಿ ಸಂಗೀತದ ಆಸಕ್ತಿ ಬೆಳಸಿಕೊಳ್ಳಬೇಕೆಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಕರೆ ನೀಡಿದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ವತಿಯಿಂದ ಕುಶಾಲನಗರದ ಸಮಾಜ ಕಲ್ಯಾಣ ಇಲಾಖೆಯ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಹಮ್ಮಿಕೊಂಡಿದ್ದ ಗಿರಿಜನ ಉಪ ಯೋಜನೆಯಡಿ ಗುರುಶಿಷ್ಯ ಪರಂಪರೆ ತರಬೇತಿ ಮೂಲಕ ಸಂಗೀತ ಕಾರ್ಯಕ್ರಮದ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ಉತ್ತಮ ಯೋಜನೆಗಳ ಮೂಲ ಸಾಹಿತ್ಯ ಸಂಸ್ಕøತಿಗೆ ಪೂರಕವಾಗಿ ಮನರಂಜನೆ ನೀಡುತ್ತಾ ಬರುತ್ತಿದೆ ಎಂದರು. ಶಿಕ್ಷಣದ ಜೊತೆಗೆ ಮೌಲ್ಯವರ್ದಿತ ಜೀವನ ಮಟ್ಟ ಕಾಯ್ದುಕೊಳ್ಳಲು ನಾವು ಸಂಗೀತದ ಕಡೆಗೆ ಗಮನಹರಿಸಬೇಕು ಎಂದು ಸಾಗರ್ ಹೇಳಿದರು.

ಮುಖ್ಯ ಅತಿಥಿಯಾದ ಆಹಾರ ಸಂರಕ್ಷಣಾ ಅಭಿಯಾನದ ಸಂಚಾಲಕ ಎನ್.ಕೆ. ಮೋಹನ್‍ಕುಮಾರ್ ಮಾತನಾಡಿ, ಸಾಹಿತ್ಯ-ಸಂಸ್ಕøತಿಕ ಬೆಳೆಸಲು ತಮ್ಮ ಜೀವನವನ್ನು ಮುಡಿಪಾಗಿಡುವದರೊಂದಿಗೆ ತಾವು ಸಹ ಸಂಗೀತದ ಸದಭಿರುಚಿ ಬೆಳೆಸಿಕೊಳ್ಳಬೇಕೆಂದರು.

ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯದ ವಾರ್ಡನ್ ಮಧು ಮಾತನಾಡಿದರು. ಪ್ರಾಸ್ತಾವಿಕ ನುಡಿಯಾಡಿದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮಣಜೂರು ಮಂಜುನಾಥ ಸ್ವಾಗತಿಸಿ, ವಂದಿಸಿದರು. ವೇದಿಕೆಯಲ್ಲಿ ಗುರು-ಶಿಷ್ಯ ಪರಂಪರೆ ಕಾಂiÀರ್iಕ್ರಮದ ಶಿಕ್ಷಕ ಷಡಾಕ್ಷರಯ್ಯ ಉಪಸ್ಥಿತರಿದ್ದರು.