ಚೆಟ್ಟಳ್ಳಿ, ಜ. 16: ಅರಬ್ ದೇಶದಲ್ಲಿ ಕಾರ್ಯಾಚರಿಸುತ್ತಿರುವ ವೀರಾಜಪೇಟೆ ಸಮೀಪದ ಗುಂಡಿಕೆರೆಯ ಹಿದಾಯತುಲ್ ಇಸ್ಲಾಂ ಫೂಚರ್ ಮೆಂಬರ್ ಯು.ಎ.ಇ. ಸಮಿತಿ ವತಿಯಿಂದ ಗುಂಡಿಕೆರೆ ಜಮಾಹತ್ತಿನ ಅಧ್ಯಕ್ಷ ಅಬ್ಬಾಸ್ ಹಾಗೂ ಯುವ ಕ್ರೀಡಾಪಟು ಸುಹೈಲ್ ಗುಂಡಿಕೆರೆ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮ ಸಂಘಟನೆಯ ಅಧ್ಯಕ್ಷ ನಿಜಾರ್ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭ ಮಾತನಾಡಿದ ಮಿದಿಲಾಜ್ ಅನೇಕ ಧಾರ್ಮಿಕ ಮತ್ತು ಸಾಮಾಜಿಕ ಸೇವೆಗಳನ್ನು ಮಾಡುತ್ತಾ ಸಂಘಟನೆಯು 13ನೇ ವರ್ಷಕ್ಕೆ ಕಾಲಿಟ್ಟಿರುವದು ಸಂತೋಷದ ವಿಷಯವಾಗಿದೆ ಎಂದರು.
ಸುಹೈಲ್ ಸ್ವಾಗತಿಸಿ, ಜಸೀಲ್ ವಂದನಾರ್ಪಣೆ ಮಾಡಿದರು. ಈ ಸಂದರ್ಭ ಸಲೀಂ, ಝಕರಿಯಾ ಇದ್ದರು.