ಸೋಮವಾರಪೇಟೆ,ಜ.14: ಪಟ್ಟಣದ ಮಹದೇಶ್ವರ ಬಡಾವಣೆ ಯಲ್ಲಿರುವ ಅಡಿಕೆ ತೋಟದ ಒಳಗೆ ಅಕ್ರಮವಾಗಿ ಅಂದರ್ ಬಾಹರ್ ಆಟದಲ್ಲಿ ನಿರತರಾಗಿದ್ದ ಗುಂಪಿನ ಮೇಲೆ ಪೊಲೀಸ್ ಕಾರ್ಯಾಚರಣೆ ನಡೆದಿದ್ದು, ಮೂವರು ವಶಕ್ಕೆ ಸಿಕ್ಕಿದ್ದರೆ ಇತರ ಮೂವರು ಸ್ಥಳದಿಂದ ಓಡಿ ಪರಾರಿಯಾಗಿರುವ ಘಟನೆ ನಡೆದಿದೆ.

ಎಂ.ಡಿ. ಬ್ಲಾಕ್‍ನ ಕೆಳಭಾಗದಲ್ಲಿರುವ ಅಡಿಕೆ ತೋಟದಲ್ಲಿ ಕಳೆದ ಅನೇಕ ಸಮಯದಿಂದ ನಿರಂತರವಾಗಿ ಜೂಜಾಟ ನಡೆಯುತ್ತಿದ್ದು, ಇಂದು ಪೊಲೀಸರು ಧಾಳಿ ನಡೆಸಿದ ಸಂದರ್ಭ ಬೇಳೂರು ಬಾಣೆ ಸಮೀಪದ ಶಾಂತಕುಮಾರ್, ಜನತಾಕಾಲೋನಿಯ ಚಂದ್ರು ಮತ್ತು ಉತ್ತಯ್ಯ ಅವರುಗಳು ಸಿಕ್ಕಿಬಿದ್ದಿದ್ದಾರೆ.

ಬಂಧಿತರಿಂದ ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 13,100 ರೂಪಾಯಿಗಳನ್ನು ವಶಕ್ಕೆ ಪಡೆದುಕೊಂಡು, ಕಾನೂನು ಕ್ರಮ ಜರುಗಿಸಲಾಗಿದೆ. ಕಾರ್ಯಾ ಚರಣೆ ವೇಳೆ ಓಡಿ ಪರಾರಿಯಾಗಿರು ವವರ ವಿರುದ್ಧವೂ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ.

ಕಾರ್ಯಾಚರಣೆಯಲ್ಲಿ ಪೊಲೀಸ್ ಠಾಣಾಧಿಕಾರಿ ಶಿವಶಂಕರ್, ಸಿಬ್ಬಂದಿಗಳಾದ ಪ್ರವೀಣ್, ಜಗದೀಶ್, ಕುಮಾರ್, ಶಿವಕುಮಾರ್, ಸಂದೇಶ್ ಅವರುಗಳು ಭಾಗವಹಿಸಿದ್ದರು.