ಸುಂಟಿಕೊಪ್ಪ, ಜ. 16: ಇಲ್ಲಿನ ಪೊಂಗಲ್ ಸಮಿತಿ ವತಿಯಿಂದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಸಂಭ್ರಮದ ಪೊಂಗಲ್ (ಸಂಕ್ರಾಂತಿ) ಹಬ್ಬ ಶ್ರದ್ಧಾ ಭಕ್ತಿಯಿಂದ ಮಂಳವಾರ ನೆರವೇರಿತು.
ಇಲ್ಲಿನ ಮಧುರಮ್ಮ ಬಡಾವಣೆಯಲ್ಲಿರುವ ವೃಕ್ಷೋದ್ಭವ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಿದ ನಂತರ ಹಾಸನ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ವೇದಿಕೆ ಅಧ್ಯಕ್ಷರಾದ ಎ.ಲೊಕೇಶ್ಕುಮಾರ್ ಪೂರ್ಣ ಕುಂಭ ಕಳಸವನ್ನು ಎತ್ತಿ ನೀಡುವದರ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ದಕ್ಷಿಣಾಯಣ ಕಳೆದು ಉತ್ತರಾಯಣ ಕಾಲಕ್ಕೆ ಪಾದಾರ್ಪಣೆಯಾಗುವ ಈ ಸಂದರ್ಭದಲ್ಲಿ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಮರೆತು ಎಲ್ಲರೂ ಒಂದಾಗಿ ಬೇರೆ ಬೇರೆ ಸಂಸ್ಕøತಿಗಳನ್ನು ಅರ್ಥಮಾಡಿಕೊಂಡು ಶಾಂತಿ ಜೀವನ ನಡೆಸುವಂತಾUಲಿ. ಸುಂಟಿಕೊಪ್ಪದಲ್ಲಿ ಪೊಂಗಲ್ (ಸಂಕ್ರಾಂತಿ) ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಸುಂಟಿಕೊಪ್ಪದ ಜನತೆ ಆಚರಿಸುತ್ತಿರುವದು ಹೆಮ್ಮೆಯಾಗಿದೆ. ನಾಡಿನ ಜನತೆಗೆ ಶುಭವಾಗಲಿ ಎಂದು ಹಾರೈಸಿದರು. ಈ ಸಂದರ್ಭ ವೃಕ್ಷೋದ್ಭವ ಗಣಪತಿ ದೇವಾಲಯದ ಉತ್ಸವ ಸಮಿತಿ ಅಧ್ಯಕ್ಷ ಬಿ.ಎಸ್À. ಸದಾಶಿವ ರೈ, ಖಜಾಂಚಿ ಶಿವಮಣಿ, ಗ್ರಾಮ ಪಂಚಾಯಿತಿ ಸದಸ್ಯ ಶ್ರೀಧರ ಕುಮಾರ್, ಗುತ್ತಿಗೆದಾರ ಎಂ. ಮಂಜು, ಪೊಂಗಲ್ ಸಮಿತಿ ಅಧ್ಯಕ್ಷರಾದ ದೊರೈ, ಗೌರವ ಅಧ್ಯಕ್ಷ ಸಿ.ಚಂದ್ರ, ಸzಸ್ಯರಾದ ಅಯ್ಯಪ್ಪ,ಸುರೇಶ, ಹಾಜರಿದ್ದರು. ಮಹಿಳೆಯರು ಹಾಲಿನಿಂದ ತುಂಬಿದ ಪೂರ್ಣ ಕುಂಭ ಕಳಸವನ್ನು ಹೊತ್ತು ನಾದಸ್ವರ ದೊಂದಿಗೆ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಿ ರಾಮ ಮಂದಿರ, ಅಯ್ಯಪ್ಪ ದೇವಾಲಯಗಳಿಗೆ ತೆರಳಿ ಪೂಜೆ ಮುಗಿಸಿ ಅಲ್ಲಿಂದ ಚಾಮುಂಡೇಶ್ವರಿ ದೇವಾಲಯದಲ್ಲಿ ಕಳಸಗಳಿಗೆ ಪೂಜೆ ನೆರವೇರಿಸಿ. ದೇವಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ ಭಕ್ತರು ಪೊಂಗಲ್ ಅಡುಗೆ ಮಾಡಿ ಹಬ್ಬವನ್ನು ಸಂತೋಷದಿಂದ ಆಚರಿಸಿದರು. ನಂತರ.ಮದ್ಯಾಹ್ನ ನೆರೆದಿದ್ದ ನೂರಾರು ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು.