ವೀರಾಜಪೇಟೆ, ಜ. 16: ಅಕ್ರಮವಾಗಿ ಗಾಂಜಾ ಪಡೆದು ಅದನ್ನು ಕೇರಳ ರಾಜ್ಯದಲ್ಲಿ ಮಾರಾಟ ಮಾಡುವ ಸಾಗಾಟಕ್ಕೆ ಯತ್ನಿಸಿದ ಯುವಕರನ್ನು ಬಂದಿಸಿದ ಘಟನೆ ವೀರಾಜಪೇಟೆ ಪೆರುಂಬಾಡಿಯಲ್ಲಿ ನಡೆದಿದೆ.
ವೀರಾಜಪೇಟೆ ಪೆರುಂಬಾಡಿ ಗ್ರಾಮದ ಪೊಲೀಸ್ ತನಿಖಾ ಕೇಂದ್ರದ ಅನತಿ ದೂರದಲ್ಲಿ ತಾತ್ಕಾಲಿಕ ನೋಂದಾಣಿ ಸಂಖ್ಯೆ (ಕೆಎಲ್ 58 ಬಿ 3118) ಬಿಳಿ ಬಣ್ಣದ ಮಾರುತಿ ಸ್ವಿಫ್ಟ್ ಕಾರಿನಲ್ಲಿ ರಾಜ್ಯಕ್ಕೆ ಮೋಜಿಗಾಗಿ ಆಗಮಿಸಿ ಹಿಂತಿರುಗುವ ಸಂದÀರ್ಭದಲ್ಲಿ ಪೆರುಂಬಾಡಿ ಗ್ರಾಮದ ಅಲ್ ಶೀಫಾ ಹೊಟೇಲ್ ಬಳಿ ಕಾರು ನಿಂತಿತ್ತು. ಕಾರಿನಲ್ಲಿದ್ದ ಯುವಕರು ಮತ್ತಿನ ಗುಂಗಿನಲ್ಲಿದ್ದರು. ಇದನ್ನು ಗಮನಿಸಿದ ಗ್ರಾಮಸ್ಥರೊಬ್ಬರು ಅನುಮಾನದಿಂದ ನಗರ ಪೊಲೀಸ್ ಠಾಣೆಗೆ ದೂರವಾಣಿ ಕರೆಯನ್ನು ಮಾಡಿ ಮಾಹಿತಿ ನೀಡಿದ್ದು, ಪೊಲೀಸರು ಕಾರನ್ನು ಹಿಂಬಾಲಿಸಿ ನಂತರ ಕಾರನ್ನು ತಪಾಸಣೆಗೆ ಒಳಪಡಿಸಿದ್ದಾರೆ.
ತಪಾಸಣೆ ವೇಳೆಯಲ್ಲಿ ಕಾರಿನ ಹಿಂಬದಿಯ ಆಸನದ ಒಳಭಾಗ ಕೈ ಚೀಲದಲ್ಲಿ ಮಾರಾಟ ಮಾಡಲು ಒಯ್ಯುತ್ತಿದ್ದ 300 ಗ್ರಾಂ 14 ಮಿಲಿ ಗಾಂಜಾ ಗೋಚರಿಸಿದೆ. 3000 ರೂ. ನಗದು ಸೇರಿದಂತೆ ಕಾರನ್ನು ವಶಕ್ಕೆ ಪಡೆದಿದ್ದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ನಿವಾಸಿಗಳಾದ ಎಸ್.ಕೆ. ಅನ್ಸಿಫ್ (25), ಸಿ.ಹೆಚ್. ಅಸ್ಗರ್ (22), ಕೆ.ಎಂ. ಅನ್ವರ್ (26) ಮತ್ತು ಕಣ್ಣೂರು ಜಿಲ್ಲೆಯ ನಿವಾಸಿಗಳಾದ ಸಾನಿದ್.ಪಿ (24) ಹಾಗು ಶಹಜಾನ್ (25) ಎಂಬ ಯುವಕರನ್ನು ಬಂಧಿಸಿದ್ದಾರೆ. ಅರೋಪಿಗಳ ಮೇಲೆ 20(ಬಿ)11 ಎನ್.ಡಿ.ಪಿ.ಎಸ್. ಕಾಯ್ದಿ 1985 ರಂತೆ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ನಾಗಪ್ಪ ಅವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಕುಮಾರ್ ಆರಧ್ಯ ನಗರ ಪೊಲೀಸ್ ಠಾಣಾಧಿಕಾರಿ ಸಂತೋಷ್ ಕಶ್ಯಪ್, ಸಿಬ್ಬಂದಿಗಳಾದ ಸತೀಶ್, ಮಧು, ಸುಬ್ರಮಣಿ, ಸುನಿಲ್, ಪಿ.ಯು ಮುನೀರ್, ರಜನ್ ಕುಮಾರ್, ಮತ್ತು ಚಾಲಕ ಯೊಗೇಶ್ ಭಾಗವಹಿಸಿದ್ದರು. -ಕೆ.ಕೆ.ಎಸ್