ಸೋಮವಾರಪೇಟೆ, ಜ. 13: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಮಡಿಕೇರಿ-ಸೋಮವಾರಪೇಟೆ-ಶನಿವಾರಸಂತೆ, ಮಲ್ಲಿಪಟ್ಟಣ, ಅರಕಲಗೂಡು, ಹಾಸನ, ಅರಸೀಕೆರೆ ಮಾರ್ಗವಾಗಿ ನೂತನ ಬಸ್ ಸಂಚಾರಕ್ಕೆ ಚಾಲನೆ ನೀಡಲಾಗಿದೆ.

ಮಡಿಕೇರಿಯಿಂದ ಬೆಳಿಗ್ಗೆ 7 ಗಂಟೆಗೆ ಹೊರಟು ಸೋಮವಾರಪೇಟೆಗೆ 8.20ಕ್ಕೆ ಬಸ್ ಆಗಮಿಸಲಿದೆ. ನಂತರ 8.30ಕ್ಕೆ ಸೋಮವಾರಪೇಟೆಯಿಂದ ಹೊರಟು ಶನಿವಾರಸಂತೆ ಮಾರ್ಗವಾಗಿ 10.30ಕ್ಕೆ ಹಾಸನ, 12.15ಕ್ಕೆ ಅರಸೀಕೆರೆಗೆ ತೆರಳಲಿದೆ. ಮಧ್ಯಾಹ್ನ 12.30ಕ್ಕೆ ಇದೇ ಮಾರ್ಗವಾಗಿ ವಾಪಸ್ ಸೋಮವಾರಪೇಟೆಗೆ ಸಂಜೆ 4 ಗಂಟೆಗೆ ಆಗಮಿಸಿ, 4.10ಕ್ಕೆ ಇಲ್ಲಿಂದ ಹೊರಟು 5.25ಕ್ಕೆ ಮಡಿಕೇರಿಗೆ ತಲಪಲಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.

ನೂತನ ಬಸ್‍ಗೆ ಚಾಲನೆ ನೀಡಿದ ಸಂದರ್ಭ ಸಂಚಾರ ನಿಯಂತ್ರಣಾಧಿಕಾರಿ ಕಾರ್ಯಪ್ಪ, ಪ್ರಮುಖರಾದ ಅಬ್ದುಲ್ ಅಜೀಜ್ ಉಪಸ್ಥಿತರಿದ್ದರು.