ನಾಪೆÇೀಕ್ಲು, ಜ. 12: ಗ್ರಾಮಗಳಲ್ಲಿ ಕ್ರೀಡಾಕೂಟಗಳನ್ನು ನಡೆಸುವದರಿಂದ ಗ್ರಾಮಸ್ಥರ ನಡುವೆ ಪರಸ್ಪರ ಸಾಮರಸ್ಯ, ಸ್ನೇಹ ವೃದ್ಧಿಯಾಗಲಿದೆ ಎಂದು ನೆಲಜಿ ಗ್ರಾಮದ ಕೈಲ್ ಪೆÇೀಳ್ದ್ ಕ್ರೀಡಾ ಸಮಿತಿಯ ಅಧ್ಯಕ್ಷ ಅಪ್ಪುಮಣಿಯಂಡ ಸನ್ನು ಸೋಮಣ್ಣ ಅಭಿಪ್ರಾಯಪಟ್ಟರು.

ನೆಲಜಿ ಅಂಬಲ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಕ್ರೀಡಾಕೂಟ ಹಾಗೂ ಸಂತೋಷ ಕೂಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ರಾಮಗಳಲ್ಲಿ ನಡೆಯುವ ಕ್ರೀಡಾಕೂಟಗಳು ಒತ್ತಡದ ಜೀವನ ನಡೆಸುವ ಬೆಳೆಗಾರರಿಗೆ ಮನರಂಜನೆಯನ್ನು ನೀಡುತ್ತದೆ. ಅದರೊಂದಿಗೆ ಪರಸ್ಪರರಲ್ಲಿ ಸ್ನೇಹ ಸೌಹಾರ್ದವು ಬೆಳೆಯುತ್ತದೆ. ಹೊರ ಜಿಲ್ಲೆಗಳಲ್ಲಿ, ವಸತಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವ ಎಲ್ಲಾ ಮಕ್ಕಳು ಒಗ್ಗೂಡಿ ನಲಿದಾಡಲು ಇದು ವೇದಿಕೆಯಾಗುತ್ತದೆ ಎಂದರು.ಮನರಂಜನೆಯನ್ನು ನೀಡುತ್ತದೆ. ಅದರೊಂದಿಗೆ ಪರಸ್ಪರರಲ್ಲಿ ಸ್ನೇಹ ಸೌಹಾರ್ದವು ಬೆಳೆಯುತ್ತದೆ. ಹೊರ ಜಿಲ್ಲೆಗಳಲ್ಲಿ, ವಸತಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವ ಎಲ್ಲಾ ಮಕ್ಕಳು ಒಗ್ಗೂಡಿ ನಲಿದಾಡಲು ಇದು ವೇದಿಕೆಯಾಗುತ್ತದೆ ಎಂದರು.

ಅಪ್ಪಚ್ಚು, ಬದ್ದಂಜೆಟ್ಟಿರ ದೇವಯ್ಯ, ಮಣವಟ್ಟಿರ ಚಂಗಪ್ಪ, ಮಾಳೆಯಂಡ ಜಗ, ಮಾಳೆಯಂಡ ಅಪ್ಪಚ್ಚ, ಅಪ್ಪುಮಣಿಯಂಡ ನವೀನ್, ಮಂಡೀರ ಸಚಿನ್, ದೇವಯ್ಯ, ಇದ್ದರು. ಕ್ರೀಡಾಕೂಟದಲ್ಲಿ ಪುರುಷರು, ಮಹಿಳೆಯರು ಮತ್ತು ಮಕ್ಕಳಿಗೆ ಹಗ್ಗಜಗ್ಗಾಟ, ತೆಂಗಿನ ಕಾಯಿಗೆ ಗುಂಡು ಹಾರಿಸುವದು, ಸಂಗೀತ ಕುರ್ಚಿ, ರಾತ್ರಿ ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ತೆಂಗಿನಕಾಯಿಗೆ ಗುಂಡು ಹಾರಿಸುವ ಸ್ಪರ್ಧೆಯಲ್ಲಿ ಮಣವಟ್ಟಿರ ಸ್ವರೂಪ್ ಪ್ರಥಮ, ಮಾಳೆಯಂಡ ಸುಬ್ಬಯ್ಯ ದ್ವಿತೀಯ, ಮಣವಟ್ಟಿರ ಪೆÇನ್ನು ಪೆÇನ್ನಪ್ಪ ತೃತೀಯ ಸ್ಥಾನ ಪಡೆದರು.