ಶನಿವಾರಸಂತೆ, ಜ. 12: ಶನಿವಾರಸಂತೆ ಮತ್ತು ಕೊಡ್ಲಿಪೇಟೆಯ ಕರಾಟೆ ಪಟುಗಳು ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಮಾರ್ಷಲ್ ಆಟ್ರ್ಸ್ ಮತ್ತು ಯೋಗ ಸಂಸ್ಥೆ ವತಿಯಿಂದ ಹೆಚ್.ಡಿ. ಕೋಟೆ ತಾಲೂಕಿನ ನಗರೂರಿನಲ್ಲಿ ನಡೆದ ಪರೀಕ್ಷೆಯಲ್ಲಿ ಬ್ಲ್ಯಾಕ್‍ಬೆಲ್ಟ್ ಪಡೆದಿದ್ದಾರೆ.

ವಿವಿಧ ಶಾಲೆಗಳ ವಿದ್ಯಾರ್ಥಿಗಳಾದ ಚಿರಂತನ್, ದೀಕ್ಷಾ, ಅನಿಲ್, ಮನುಕೃಷ್ಣ, ನಿಶಾಂತ್, ಶ್ರೇಯಸ್, ರಂಜಿತ್, ಕೀರ್ತಿ, ರಚನಾ, ಜ್ಞಾನವ್, ಮುಕುಂದ್, ಆಕಾಶ್, ತೇಜಸ್ವಿನಿ, ಸಚಿನ್ ಇವರೆಲ್ಲ ಎರಡನೇ ಡಿಗ್ರಿ ಬ್ಲ್ಯಾಕ್‍ಬೆಲ್ಟ್ ಪಡೆದಿರುತ್ತಾರೆ. ತರಬೇತುದಾರರಾಗಿ ಅರುಣ್, ಜಯಕುಮಾರ್, ಶಾಹಿದ್, ಭರತ್, ಪಳನಿ ಕಾರ್ಯನಿರ್ವಹಿಸಿರುತ್ತಾರೆ.