ಗುಡ್ಡೆಹೊಸೂರು, ಜ. 12: ನ್ಯಾಷನಲ್ ಇನ್‍ಷ್ಟ್‍ಟ್ ಆಫ್ ಮಾರ್ಷಲ್ ಆಟ್ರ್ಸ್ ಮತ್ತು ಯೋಗ ಸಂಸ್ಥೆ ವತಿಯಿಂದ ಇತ್ತೀಚೆಗೆ ಹೆಚ್.ಡಿ. ಕೋಟೆ ಸರಗೂರಿನಲ್ಲಿ ಆಯೋಜಿಸಿದ್ದ ಬ್ಲ್ಯಾಕ್ ಬೆಲ್ಟ್ ಪರೀಕ್ಷೆಯಲ್ಲಿ ಕುಶಾಲನಗರ ಸಮೀಪದ ಯಡವನಾಡು ಗ್ರಾಮದ ಪಾಣತ್ತಲೆ ಆನಂದ ಅವರ ಪುತ್ರ ದರ್ಶನ್ ಪಾಣತ್ತಲೆ ಮತ್ತು ಸುಳ್ಯಕೋಡಿ ಜೀವನ್ ಅವರ ಪುತ್ರ ಧ್ರುವ ಬೆಳ್ಯಪ್ಪ ಅವರು ಬ್ಲ್ಯಾಕ್‍ಬೆಲ್ಟ್ ಪದವಿಯನ್ನು ಪಡೆದಿದ್ದಾರೆ. ತರಬೇತಿದಾರರಾಗಿ ಯಡವನಾಡಿನ ಜೆ.ಎನ್. ಚಂದ್ರ ಕಾರ್ಯನಿರ್ವಯಿಸಿದ್ದರು.