ಮಡಿಕೇರಿ, ಜ. 11: ಸೋಮವಾರಪೇಟೆ ತಾಲೂಕಿನ ಶಾಂತಳ್ಳಿಯಲ್ಲಿ ತಾ. 13 ರಿಂದ 17 ರವರೆಗೆ ಶ್ರೀ ಕುಮಾರಲಿಂಗೇಶ್ವರಸ್ವಾಮಿ ಜಾತ್ರೆ ಮತ್ತು 60ನೇ ಮಹಾರಥೋತ್ಸವ ನಡೆಯಲಿದೆ.
ತಾ. 13 ರಂದು ಬೆಳ್ಳಿ ಬಂಗಾರ ದಿನ ಸಂಜೆ 6.30 ಗಂಟೆಯಿಂದ 7.30 ಗಂಟೆಯವರೆಗೆ ಜಾತ್ರಾ ಪ್ರಾರಂಭೋತ್ಸವ ಪೂಜೆ, ಧರ್ಮದರ್ಶಿ ಮಂಡಳಿ ಮತ್ತು ಗ್ರಾಮಸ್ಥರಿಂದ ಜಾತ್ರೆ ಪ್ರಾರಂಭ ಪೂಜೆ ಮತ್ತು ಪ್ರಾರ್ಥನೆ, ಪ್ರಸಾದ.
ತಾ. 14 ರಂದು ಮಕರ ಸಂಕ್ರಮಣ ಕರುವಿನ ಹಬ್ಬ, ರಾತ್ರಿ 7 ಗಂಟೆಗೆ ದೇಗುಲದ ಗರುಡ ಕಂಬದ ಅಗ್ರಪೀಠದಲ್ಲಿ ತುಪ್ಪದ ನಂದಾದೀಪವನ್ನು ಬೆಳಗಿಸುವದು ಮತ್ತು ಅಂಕುರಾರ್ಪಣ ಪೂಜೆ, ಮಹಾಮಂಗಳಾರತಿ, ಪ್ರಾರ್ಥನೆ, ಪ್ರಸಾದ ಸ್ವೀಕಾರ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿದೆ.
ತಾ. 15 ರಂದು ಬೆಳಿಗ್ಗೆ 11.50 ಗಂಟೆಯಿಂದ ಮಧ್ಯಾಹ್ನ 1.20 ರವರೆಗೆ ಅರಸು ಭಲ ಸೇವೆ. ದೇಗುಲದಲ್ಲಿ ರಾತ್ರಿ 7.30 ಗಂಟೆಯಿಂದ ಗಣಹೋಮ, ರಂಗಪೂಜೆ, ಬೀದಿ ಉತ್ಸವ, ಮಹಾಮಂಗಳಾರತಿ ಕಾರ್ಯಕ್ರಮಗಳು ಜರುಗುತ್ತದೆ.
ತಾ. 16 ರಂದು ಮಧ್ಯಾಹ್ನ 12.05 ಗಂಟೆ ಶುಭ ಮೂಹೂರ್ತದಲ್ಲಿ ಶ್ರೀ ಕುಮಾರಲಿಂಗೇಶ್ವರಸ್ವಾಮಿಯ 60ನೇ ಮಹಾರಥೋತ್ಸವ ಮತ್ತು ಮಧ್ಯಾಹ್ನ 12.10 ರಿಂದ 2.30 ರವರೆಗೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6 ಗಂಟೆಗೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಡೊಳ್ಳು ಕುಣಿತ ಮತ್ತು ಕಂಸಾಳೆ ಕಾರ್ಯಕ್ರಮ, ನಂತರ ರಾತ್ರಿ 7 ಗಂಟೆಗೆ ದೇವಾಲಯದ ಜಾತ್ರಾ ಕಾರ್ಯಕ್ರಮವು ವೇದಮೂರ್ತಿ ಶಿಬರೂರು ಗೋಪಾಲಕೃಷ್ಣ ತಂತ್ರಿ ಅವರ ನೇತೃತ್ವದಲ್ಲಿ ಪಲ್ಲಕ್ಕಿ ಉತ್ಸವ ನಡೆಯಲಿದೆ.
ತಾ. 17 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 12.30 ಗಂಟೆಯವರೆಗೆ ಆಹ್ವಾನಿತ ತಂಡಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ. ಭಾಗವಹಿಸುವವರು ಹೆಚ್ಚಿನ ಮಾಹಿತಿಗೆ ಕೆ.ಟಿ. ಮಧುಕುಮಾರ ಅವರ ದೂರವಾಣಿ ಸಂಖ್ಯೆ: 8277131355 ಸಂಪರ್ಕಿಸಬಹುದಾಗಿದೆ.
ನಂತರ ಮಧ್ಯಾಹ್ನ 2 ಗಂಟೆಗೆ ಜಾತ್ರಾ ಮುಕ್ತಾಯ ಸಮಾರಂಭ ನಡೆಯಲಿದೆ. ಶ್ರೀ ಕುಮಾರಲಿಂಗೇಶ್ವರ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಜಿ.ಎಸ್. ರಘುಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್, ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಮಾಜಿ ವಿಧಾನ ಪರಿಷತ್ ಸದಸ್ಯ ಎಸ್.ಜಿ. ಮೇದಪ್ಪ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಇತರರು ಪಾಲ್ಗೊಳ್ಳಲಿದ್ದಾರೆ.
60ನೇ ಮಹಾ ರಥೋತ್ಸವದ ಪ್ರಯುಕ್ತ ತಾ. 15 ಮತ್ತು 16 ರಂದು ಅಂತರ್ ಜಿಲ್ಲಾ ಮಟ್ಟದ ಪುರುಷರ ಕಬಡ್ಡಿ ಮತ್ತು ಮಹಿಳೆಯರ ಥ್ರೋಬಾಲ್ ಪಂದ್ಯಾಟಗಳು ನಡೆಯಲಿವೆ.