*ಮೂರ್ನಾಡು, ಜ. 11: ಇಲ್ಲಿಗೆ ಸಮೀಪದ ಎಂ. ಬಾಡಗ, ಬೇತ್ರಿ ಸಮೀಪದ ಮಹಾವಿಷ್ಣು ದೇವಸ್ಥಾನದ ಜೀರ್ಣೋದ್ಧಾರ (ನವೀಕರಣ) ಅಷ್ಟಬಂಧ ಬ್ರಹ್ಮಕಲಶೋತ್ಸವ ದೇವಸ್ಥಾನದ ತಕ್ಕರು ಹಾಗೂ ಅಧ್ಯಕ್ಷ ಅಚ್ಚಕಾಳೀರ ತಿಮ್ಮಯ್ಯ ಇವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಉತ್ತರಭಾರತದ ಯೋಗಿ ರಾಮಚಂದ್ರ ಸ್ವಾಮೀಜಿ ಇವರಿಂದ ಧಾರ್ಮಿಕ ಕಾರ್ಯಕ್ರಮಗಳು, ಅನ್ನಸಂತರ್ಪಣೆ ಜರುಗಿದವು.