ಶನಿವಾರಸಂತೆ, ಜ. 11: ಶನಿವಾರಸಂತೆಯಲ್ಲಿ ಮದ್ಯಪಾನ ಮಾಡಿ ಕಾರು (ಕೆಎ12-ಪಿ 1800) ಚಾಲನೆ ಮಾಡಿದ ಕಾರು ಮಾಲೀಕನಿಗೆ ನ್ಯಾಯಾಲಯ ರೂ. 3,600 ದಂಡ ವಿಧಿಸಿದ್ದು, ದಂಡ ಕಟ್ಟಿ ಕಾರನ್ನು ಬಿಡಿಸಿಕೊಂಡಿದ್ದಾರೆ.ಶನಿವಾರಸಂತೆ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ ವಾಹನಗಳ ತಪಾಸಣೆ ಮಾಡುತ್ತಿದ್ದ ವೇಳೆ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿಕೊಂಡು ಬಂದ ಕಿತ್ತೂರು ಗ್ರಾಮದ ಕೆ.ಎಸ್. ಮೂರ್ತಿ ಅವರನ್ನು ಮದ್ಯಪಾನ ತಪಾಸಣೆ ಯಂತ್ರದಿಂದ ತಪಾಸಣೆ ಮಾಡಿ ಮದ್ಯಪಾನ ಮಾಡಿರುವದು ದೃಢಪಟ್ಟಿರುವದರಿಂದ ಸದರಿ ಅವರ ಕಾರನ್ನು ಅಮಾನತ್ತು ಪಡಿಸಿಕೊಂಡು ಪ್ರಕರಣ ದಾಖಲಿಸಿದ್ದರು. ಸೋಮವಾರಪೇಟೆ ನ್ಯಾಯಾಲಯ ರೂ. 3,600 ದಂಡ ವಿಧಿಸಿದ್ದು, ದಂಡ ಕಟ್ಟಿ ಕಾರನ್ನು ಬಿಡಿಸಿಕೊಂಡಿದ್ದಾರೆ.