ಸೋಮವಾರಪೇಟೆ, ಜ.10: ರೋಟರಿ ಸಂಸ್ಥೆಯು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಪ್ರೌಢಶಾಲೆಗಳಲ್ಲಿ ಸ್ಥಾಪಿಸುವ ಇಂಟರಾಕ್ಟ್ ಕ್ಲಬ್ಗಳನ್ನು ರೋಟರಿ ಜಿಲ್ಲೆಯಲ್ಲಿ ಅತೀ ಹೆಚ್ಚು ಆರಂಭಿಸಿರುವ ಸೋಮವಾರಪೇಟೆ ರೋಟರಿ ಹಿಲ್ಸ್ ಘಟಕ ಪ್ರಶಸ್ತಿಗೆ ಭಾಜನವಾಗಿದೆ.
ಮೈಸೂರು, ಮಂಗಳೂರು, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳನ್ನೊಳಗೊಂಡ ರೋಟರಿ ಜಿಲ್ಲೆಯ 75 ಕ್ಲಬ್ಗಳ ಪೈಕಿ ಸೋಮವಾರಪೇಟೆ ರೋಟರಿ ಹಿಲ್ಸ್ನ ಅಧ್ಯಕ್ಷ ಪಿ.ಕೆ.ರವಿ ನೇತೃತ್ವದಲ್ಲಿ ಒಟ್ಟು 10 ಪ್ರೌಢಶಾಲೆಗಳಲ್ಲಿ ಇಂಟರಾಕ್ಟ್ ಸಂಸ್ಥೆಗಳನ್ನು ಆರಂಭಿಸುವ ಮೂಲಕ ಅತೀ ಹೆಚ್ಚು ಇಂಟರಾಕ್ಟ್ ಕ್ಲಬ್ಗಳನ್ನು ಆರಂಭಿಸಿದ ಕೀರ್ತಿಗೆ ಭಾಜನರಾಗಿದ್ದಾರೆ.
ಇತ್ತೀಚೆಗೆ ಪುತ್ತೂರಿನಲ್ಲಿ ಜರುಗಿದ ರೋಟರಿ ಜಿಲ್ಲಾ ಮಟ್ಟದ ಇಂಟರಾಕ್ಟ್ ಸಮಾವೇಶದಲ್ಲಿ ರೋಟರಿ ರಾಜ್ಯಪಾಲ ಪಿ.ರೋಹಿನಾಥ್ ಅವರು ಪಿ.ಕೆ.ರವಿಯವರಿಗೆ ಪ್ರಶಸ್ತಿ ವಿತರಿಸಿದರು.