ಕುಶಾಲನಗರ, ಜ. 10: ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವೆಂಕಟೇಶ್ವರ ಬಡಾವಣೆಯ ಶ್ರೀ ವೆಂಕಟೇಶ್ವರ ಸೇವಾ ಸಂಘದ 3ನೇ ವಾರ್ಷಿ ಕೋತ್ಸವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಉದ್ಯಮಿ ಉಮಾಶಂಕರ್ ಮಾತನಾಡಿ, ಸಮಾಜದಲ್ಲಿ ಭಾವೈಕ್ಯತೆ, ಸಹಕಾರ ಮನೋಭಾವ ಅತ್ಯಗತ್ಯ. ನೆರೆಹೊರೆಯವರ ಜೊತೆಯಲ್ಲಿ ಬಾಳ್ವೆ ನಡೆಸುವಾಗ ಸಮಾನವಾದ ಮನಸ್ಸನ್ನು ಹೊಂದಿರಬೇಕು. ಯಾವದೇ ಅಂತರಗಳನ್ನು ಇಟ್ಟುಕೊಳ್ಳದೆ ಒಂದಾಗಿ ಬದುಕುವ ಮನಸ್ಥಿತಿ ಇರಬೇಕು. ಪರಿಸರ ಮತ್ತು ವಾತಾವರಣದ ಸ್ವಚ್ಛತೆಗೆ ಆದ್ಯತೆಯನ್ನು ಕೊಡುವದರ ಮೂಲಕ ಅವಶ್ಯಕವಾಗುವ ಮೂಲಭೂತ ಸೌಲಭ್ಯಗಳನ್ನು ಹೊಂದಲು ಇಂತಹ ಸೇವಾ ಸಮಿತಿಗಳು ಕ್ರಿಯಾತ್ಮಕವಾಗಿ ಕಾರ್ಯಚಟುವಟಿಕೆಗಳಿಂದ ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡಿದ್ದ ಪಟ್ಟಣ ಪಂಚಾಯಿತಿ ಸದಸ್ಯರಾದ ಸುರಯ್ಯ ಭಾನು, ವಿ.ಎಸ್. ಆನಂದಕುಮಾರ್, ಕೃಷಿ ಅಭಿವೃದ್ಧಿ ಅಧಿಕಾರಿ ರಾಜಶೇಖರ್ ಮಾತ ನಾಡಿದರು. ಕಾರ್ಯಕ್ರಮದಲ್ಲಿ ದಾನಿಗಳಾದ ಧನರಾಜ್, ಗುತ್ತಿಗೆದಾರ ರಾದ ರವಿ, ಬಿ.ಎಲ್. ಸುರೇಶ್, ಪುಷ್ಪಾವತಿ, ವೆಂಕಟೇಶ್, ಬಲರಾಮ್ ಶೆಟ್ಟಿ, ಮಂಜುನಾಥ ಶೆಟ್ಟಿ, ಬಾಲಚಂದ್ರಗುಪ್ತ ಅವರಿಗೆ ಸೇವಾ ಸಮಿತಿ ವತಿಯಿಂದ ಸನ್ಮಾನ ಮಾಡ ಲಾಯಿತು. ಸೇವಾ ಸಮಿತಿಯ ಕುಟುಂಬಗಳ ಸಾಂಸ್ಕೃತಿಕ ಕಾರ್ಯ ಕ್ರಮಗಳು ಆಟೋಟಗಳಲ್ಲಿ ಪಾಲ್ಗೊಂಡ ವರಿಗೆ ಬಹುಮಾನ ವಿತರಿಸಲಾಯಿತು. ಕಲಾವಿದೆ ಮಂಜು ಭಾರ್ಗವಿ ತಂಡದಿಂದ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ಸಂಘದ ಅಧ್ಯಕ್ಷ ನಿವೃತ್ತ ಇಂಜಿನಿಯರ್ ಪದ್ಮನಾಭ, ಉಪಾಧ್ಯಕ್ಷ ಹೊನ್ನಪ್ಪ, ಕಾರ್ಯದರ್ಶಿ ಸುರೇಶ್, ಖಜಾಂಚಿ ಪರಮೇಶ್ ಮತ್ತಿತರರು ಇದ್ದರು.