ಮಡಿಕೇರಿ, ಜ. 10: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೂಡಿಗೆ ವಲಯದ ಸೀಗೆಹೊಸೂರು ಭಾಂದವ್ಯ ಮಹಿಳಾ ಜ್ಞಾನವಿಕಾಸ ಕೇಂದ್ರದಲ್ಲಿ ಕಾನೂರಾಯನ ಚಲನಚಿತ್ರ ಪ್ರದರ್ಶನ ಕಾರ್ಯಕ್ರಮವು ಕೇಂದ್ರದ ಸದಸ್ಯೆ ಸೀಗೆಹೊಸೂರು ರೇಷ್ಮಾ ಅವರ ಮನೆಯಲ್ಲಿ ನಡೆಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಪ್ರಕಾಶ್ ವೈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮನೆ ಮಂದಿಗೆಲ್ಲ ಜ್ಞಾನದ ಬೆಳಕು ಪಸರಿಸುವದು. ಆತ್ಮಸ್ಥೈರ್ಯ? ಛಲ ಸಂಘಟನೆಯ ಸಾಮಥ್ರ್ಯ ಹಾಗೂ ಹಿರಿಯರ ಪ್ರೇರಣೆ ದೊರೆತರೆ ಮಹಿಳೆಯೊಬ್ಬಳು ಸಮಾಜದಲ್ಲಿ ಉನ್ನತ ಸ್ಥಾನಗಳನ್ನು ಪಡೆದುಕೊಳ್ಳಲು ಸಾಧ್ಯವೆಂಬದು ಕಾನೂರಾಯಣ ಚಲನಚಿತ್ರದಲ್ಲಿ ಬರುವ ಪಾತ್ರಗಳಿಂದ ಕಲಿತುಕೊಳ್ಳಲು ಸಾಧ್ಯವಾಗುತ್ತದೆ ಎಂದರು. ಪೂಜ್ಯರ ಆಶಯದಂತೆ ಸಂಕ್ರಾತಿಯ ಮೊದಲು ನಮ್ಮೂರು ನಮ್ಮ ಶ್ರದ್ಧಾಕೇಂದ್ರ ಘೋಷಣೆ ಯಡಿಯಲ್ಲಿ ತಾಲೂಕಿನಾದ್ಶಂತ 70ಕ್ಕೂ ಹೆಚ್ಚು ಧಾರ್ಮಿಕ ಶ್ರದ್ಧಾಕೇಂದ್ರಗಳ ಸ್ವಚ್ಛತೆ ಕಾರ್ಯ ನಡೆಯುತ್ತಿದ್ದು, ಸ್ವಚ್ಛತೆ ಕಾರ್ಯಕ್ರಮಕ್ಕೆ ಶ್ರಮಿಸಿದ ಊರಿನ ಗಣ್ಯವ್ಯಕ್ತಿಗಳು ಯೋಜನೆಯ ಕಾರ್ಯ ಕರ್ತರು ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರುಗಳಿಗೆ ವರ್ಷದ ಪ್ರಥಮ ಹಬ್ಬ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ಕೋರಿದರು.
ಕಾರ್ಯಕ್ರಮದಲ್ಲಿ ಉಪವಲಯ ಅರಣ್ಯಾಧಿಕಾರಿ ಸತೀ&divlusmn;,ï ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ, ಮನೆಯ ಯಜಮಾನ ಚೆಲುವೇಗೌಡ್ರು, ಊರಿನ ಮುಖಂಡ ಕಾವೇರಪ್ಪ, ಪಂಚಾಯತ್ ಸದಸ್ಯ ವಿಶ್ವನಾಥ ಯಡವನಾಡು, ಸೇವಾಪ್ರತಿನಿಧಿ ಸುಧಾ ಹೆಗ್ಗಡೆಹಳ್ಳಿ, ಒಕ್ಕೂಟದ ಅಧ್ಯಕ್ಷೆ ಮಂದಾಕಿನಿ, ಸೀಗೆಹೊಸೂರು ಒಕ್ಕೂಟದ ಜಯಶೀಲಾ, ಪದಾಧಿಕಾರಿ ವಿಜಯ ಉಪಸ್ಥಿತರಿದ್ದರು.
ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಪದ್ಮಾ ಯಂ.ಯಸ್. ಕಾರ್ಯಕ್ರಮ ನಿರ್ವಹಿಸಿ, ಸ್ವಾಗತಿಸಿದರು. ಸೀಗೆಹೊಸೂರು ಸೇವಾಪ್ರತಿನಿಧಿ ಸುನಂದ ವಂದಿಸಿದರು. ಕಾರ್ಯ ಕ್ರಮದಲ್ಲಿ 48ಜನ ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಪಾಲ್ಗೊಂಡಿದ್ದರು.