ಮಡಿಕೇರಿ, ಜ. 8: ಕೊಡಗು ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ತೋಟಗಾರಿಕೆ ಹಾಗೂ ಪಶುಸಂಗೋಪನಾ ಇಲಾಖೆ ಆಶ್ರಯದಲ್ಲಿ ತಾ. 11 ರಿಂದ 13ರವರೆಗೆ ಮಡಿಕೇರಿಯಲ್ಲಿ ಆಯೋಜಿಸ ಲಾಗಿರುವ ಕೊಡಗು ಪ್ರವಾಸಿ ಉತ್ಸವ ಕೇವಲ ಪ್ರವಾಸಿಗರಿಗಾಗಿ ಮಾತ್ರವಲ್ಲ; ಕೊಡಗಿನ ಜನತೆಗಾಗಿ ಹಮ್ಮಿಕೊಳ್ಳ ಲಾಗಿರುವ ಉತ್ಸವ. ಈ ಉತ್ಸವದಲ್ಲಿ ಜಿಲ್ಲೆಯ ಜನತೆ ಮುಕ್ತ ಮನಸ್ಸಿ ನೊಂದಿಗೆ ಪಾಲ್ಗೊಂಡು ಉತ್ಸವದ ಯಶಸ್ಸಿಗೆ ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ಕರೆ ನೀಡಿದ್ದಾರೆ. ಕೊಡಗು ಉತ್ಸವ ಲಾಂಛನ ಬಿಡುಗಡೆ ಮಾಡಿ ನಂತರ ತಮ್ಮ ಕಚೇರಿ ಸಭಾಂಗಣದಲ್ಲಿ ಸುದ್ದಿ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ತಾ. 11 ರಂದು ಸಂಜೆ 4.30 ಗಂಟೆಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ‘ಕೊಡಗು ಪ್ರವಾಸಿ ಉತ್ಸವಕ್ಕೆ’ ಚಾಲನೆ ನೀಡಲಿದ್ದಾರೆ. (ಮೊದಲ ಪುಟದಿಂದ) ಫಲಪುಷ್ಪ ಪ್ರದರ್ಶನವನ್ನು ತೋಟಗಾರಿಕಾ ಸಚಿವ ಎಂ.ಸಿ. ಮನಗೂಳಿ ಉದ್ಘಾಟಿಸ ಲಿದ್ದಾರೆ. ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಕೆ.ಜಿ. ಬೋಪಯ್ಯ, ಎಂ.ಪಿ.ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಎಸ್.ಎಲ್.ಬೋಜೇಗೌಡ, ಆಯ ನೂರು ಮಂಜುನಾಥ್, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಇತರರು ಪಾಲ್ಗೊಳ್ಳಲಿದ್ದಾರೆ.

ಅಂದು ಗಾಂಧಿ ಮೈದಾನದಲ್ಲಿ ಸಂಜೆ 5 ರಿಂದ 10 ಗಂಟೆಯವರೆಗೆ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ 5.30 ಗಂಟೆಯಿಂದ 6.30 ರವರೆಗೆ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಸಾಂಸ್ಕøತಿಕ ಕಾರ್ಯ ಕ್ರಮಗಳು, ಸಂಜೆ 6.30 ರಿಂದ 7.30 ರವರೆಗೆ ಗಾಯಕಿ ಎಂ.ಡಿ.ಪಲ್ಲವಿ ಮತ್ತು ತಂಡದವರಿಂದ ಜುಗಲ್ ಬಂದಿ, ಸಂಜೆ 7.30 ರಿಂದ 10 ಗಂಟೆಯವರೆಗೆ ಸರಿಗಮಪ ಲಿಟಲ್ ಚಾಂಪ್ಸ್ ಮಕ್ಕಳಾದ ಅಭಿನವ್, ಸುಪ್ರಿಯಾ ಜೋಷಿ, ಆಧ್ಯ, ಜ್ಞಾನೇಶ್, ಕೀರ್ತನಾ, ಪುಟ್ಟರಾಜು ಹೂಗಾರ್ ಇವರಿಂದ ಸಂಗೀತ ಸಂಜೆ ಹಾಗೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಖ್ಯಾತಿಯ ಮಕ್ಕಳಿಂದ ನೃತ್ಯ ವೈಭವ ನಡೆಯಲಿದೆ ಎಂದರು.

ತಾ. 12 ರಂದು ಸಂಜೆ 5.30 ರಿಂದ 5.45 ರವರೆಗೆ ಭಾರತೀಯ ವಿದ್ಯಾಭವನ, ಕೊಡಗು ವಿದ್ಯಾಲಯದ ಶಿಕ್ಷಕರ ತಂಡದವರಿಂದ ನೃತ್ಯ, ಸಂಜೆ 5.45 ರಿಂದ 6.30 ರವರೆಗೆ ಅಂಬಳೆ ಹೇರಂಭ-ಹೇಮಂತ್ ಅವರಿಂದ ಕೊಳಲು ವಾದನ, ಸಂಜೆ 6.30 ರಿಂದ 10 ಗಂಟೆಯವರೆಗೆ ಸರಿಗಮಪ ಖ್ಯಾತಿಯ ಗಾಯಕರಾದ ಸುನೀಲ್, ಚನ್ನಪ್ಪ, ಶ್ರೀಹರ್ಷ, ಇಂಪನ, ಐಶ್ವರ್ಯ, ಸುಹಾನಾ, ಸೈಯದ್ ಅವರಿಂದ ಸಂಗೀತ ಸಂಜೆ, ನಂತರ ಸ್ಯಾಂಡಲ್‍ವುಡ್ ನೈಟ್ಸ್ ಧಾರಾವಾಹಿ ಕಲಾವಿದರಾದ ನಮ್ರತಾ (ಪುಟ್ಟಗೌರಿ ಮದುವೆ), ದೀಪಿಕಾ ದಾಸ್(ನಾಗಿಣಿ), ದೀಪಿಕಾ (ಕುಲವಧು), ಭೂಮಿಕಾ (ಕಿನ್ನರಿ) ಇವರಿಂದ ನೃತ್ಯ ವೈಭವ ನಡೆಯಲಿದೆ.

ತಾ. 13 ರಂದು ಸಂಜೆ 5.30 ರಿಂದ 6.30 ರವರೆಗೆ ಅರೆಭಾಷೆ ಅಕಾಡೆಮಿ ವತಿಯಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ 6.30 ರಿಂದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ತಂಡದವರಿಂದ ಸಂಗೀತ ರಸ ಸಂಜೆ ನಡೆಯಲಿದ್ದು, ಹಿನ್ನೆಲೆ ಗಾಯಕರಾದ ವ್ಯಾಸರಾಜ್, ಅನುರಾಧ ಭಟ್, ಇಂದು ನಾಗರಾಜ್, ಲಕ್ಷ್ಮೀ ನಾಗರಾಜ್, ಸಂಜಿತ್ ಹೆಗ್ಡೆ, ಶ್ರೀನಿವಾಸ್ ಭಾಗವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ತಾ. 11 ರಿಂದ 13 ರವರೆಗೆ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8.30 ರವರೆಗೆ ರಾಜಾಸೀಟು ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದೆ. ತಾ.12 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ನಗರದ ಗಾಂಧಿ ಮೈದಾನದಲ್ಲಿ ಶ್ವಾನ ಪ್ರದರ್ಶನ ನಡೆಯಲಿದೆ. ತಾ. 13 ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಓಪನ್ ಸ್ಟ್ರೀಟ್ ಫೆಸ್ಟಿವಲ್ ನಡೆಯಲಿದೆ.

ಕೊಡಗು ಪ್ರವಾಸಿ ಉತ್ಸವ ಪ್ರಯುಕ್ತ 40 ವಸ್ತು ಪ್ರದರ್ಶನ ಮಳಿಗೆಗಳು ನಿರ್ಮಾಣವಾಗಲಿವೆ. ಆಹಾರ ಮೇಳ ಇರಲಿದೆ. ಹಾಗೆಯೇ ಸರ್ಕಾರದ ಕಾರ್ಯಕ್ರಮಗಳ ಮಾಹಿತಿ ಒಳಗೊಂಡ ಮಾಹಿತಿ ಮಳಿಗೆ ವಾರ್ತಾ ಇಲಾಖೆಯಿಂದ ನಿರ್ಮಿಸ ಲಾಗುತ್ತದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ತೋಟಗಾರಿಕೆ ಇಲಾಖೆಗಳ ವಸ್ತು ಪ್ರದರ್ಶನ ಮಳಿಗೆ ನಿರ್ಮಾಣವಾಗಲಿದೆ ಎಂದು ಅವರು ವಿವರಿಸಿದರು.

ಕೊಡಗು ಜಿಲ್ಲಾ ದರ್ಶನ ಕಾರ್ಯಕ್ರಮ ಅಂಗವಾಗಿ ಮೂರು ಮಾರ್ಗದಲ್ಲಿ ವಿವಿಧ ಪ್ರವಾಸಿ ಸ್ಥಳಗಳಿಗೆ ಬಸ್ ಸಂಚರಿಸಲಿದೆ. ಭಾಗಮಂಡಲ-ತಲಕಾವೇರಿ-ಚೇಲಾವರ ಜಲಪಾತ ಒಂದು ಮಾರ್ಗ, ದುಬಾರೆ-ನಿಸರ್ಗಧಾಮ ಮತ್ತೊಂದು ಮಾರ್ಗ ಹಾಗೂ ಅಬ್ಬಿ ಜಲಪಾತ, ಮಾಂದಲ್ ಪಟ್ಟಿ ಮತ್ತು ರಾಜಾಸೀಟು ಮತ್ತೊಂದು ಮಾರ್ಗದಲ್ಲಿ ಬಸ್ ಸಂಚರಿಸಲಿದ್ದು, ಬೆಳಿಗ್ಗೆ 8.30 ಗಂಟೆಗೆ ಬಸ್ ಹೊರಡಲಿದೆ. ಕೊಡಗಿನ ಇತಿಹಾಸ ಮತ್ತು ಸಂಸೃತಿ ಸಾರುವ ನಿಟ್ಟಿನಲ್ಲಿ ಪ್ರವಾಸಿ ಉತ್ಸವ ಜರುಗಲಿದೆ. ಕೊಡಗಿನ ಸಂಸ್ಕøತಿಯನ್ನು ಬಿಂಭಿಸುವಲ್ಲಿ ಕೊಡಗು ಉತ್ಸವ ಸಹಕಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಅಭಿಪ್ರಾಯ ವ್ಯಕ್ತಪಡಿಸಿ ದರು.ಕೊಡಗು ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ತೋಟ ಗಾರಿಕೆ ಇಲಾಖೆ, ಪಶು ಸಂಗೋಪನಾ ಇಲಾಖೆ, ಪ್ರವಾ ಸೋದ್ಯಮ ಕ್ಷೇತ್ರದ ಭಾಗಿದಾರರಾದ ಕೊಡಗು ಜಿಲ್ಲಾ ಹೊಟೇಲ್ ಮತ್ತು ರೆಸಾರ್ಟ್ ಅಸೋಷಿಯೇಷನ್, ಕೊಡಗು ಜಿಲ್ಲಾ ಟ್ರಾವೆಲ್ಸ್ ಅಸೋಷಿಯೇಷನ್, ಜಿಲ್ಲಾ ಹೋಂಸ್ಟೇ ಅಸೋಷಿಯೇಷನ್ ಮತ್ತು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅವರ ಸಹಯೋಗದಲ್ಲಿ ಪ್ರವಾಸಿ ಉತ್ಸವ ನಡೆಯಲಿದ್ದು, ಇದಕ್ಕಾಗಿ ಸುಮಾರು 1 ಕೋಟಿ ವ್ಯಯಿಸ ಲಾಗುತ್ತಿದೆ. ವಾಹನ ನಿಲುಗಡೆ ವ್ಯವಸ್ಥೆ ಮತ್ತಿತರ ಸಂಬಂಧ ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು. ಜಿ.ಪಂ. ಸಿಇಓ ಕೆ.ಲಕ್ಷ್ಮಿಪ್ರಿಯ ಇತರರು ಇದ್ದರು.