ಒಂದೆರಡು ವರ್ಷಗಳ ಹಿಂದೆ ಮೊಬೈಲ್ನಲ್ಲಿ ಒಂದು ಜಿಬಿ ಡೇಟಾಗೆ 350 ರೂಪಾಯಿ ಕೊಡುತ್ತಿದ್ದ ಜನರು ಯೂಟ್ಯೂಬ್ ತೆರೆದು ನೋಡುವಾಗ ಜೇಬು ಮುಟ್ಟಿ ನೋಡಿಕೊಳ್ಳುತ್ತಿದ್ದರು. ಆ ಸಮಯದಲ್ಲಿ ಮೊಬೈಲ್ನಲ್ಲಿ ಗಂಟೆಗಟ್ಟಲೆ ವಿಡಿಯೋಗಳನ್ನು ನೋಡಲು ಸಾಧ್ಯವೇ ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದರು. ಒಂದು ರೀತಿಯಲ್ಲಿ ಇಂದಿನ ಮೊಬೈಲ್ ಡೇಟಾ ಬೆಳವಣಿಗೆಯನ್ನು ಯಾರೂ ಕೂಡ ಕನಸಿನಲ್ಲೂ ಊಹಿಸಿರಲಿಲ್ಲ ಎನ್ನಬಹುದು. ಆಗ ಮೊಬೈಲ್‍ನಲ್ಲಿ ಟಿವಿ ವೀಕ್ಷಣೆಗೆ ಹೆಚ್ಚು ಡೇಟಾ ಜೊತೆಗೆ ಹೆಚ್ಚು ಹಣ ಬೇಕಾಗುತ್ತಿತ್ತು. ಆದರೆ, ಈಗ ಆ ಪರಿಸ್ಥಿತಿ ಇಲ್ಲ. ಮೊಬೈಲ್ನಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿಯೇ ಟಿವಿಯನ್ನು ಸಹ ಗಂಟೆಗಟ್ಟಲೆ ನೋಡಬಹುದು. ಅದಕ್ಕಾಗಿಯೇ, ಟೆಲಿಕಾಂ ಕಂಪನಿಗಳು ಭಾರೀ ಪ್ರಮಾಣದ ಡೇಟಾ ಕೊಡುತ್ತಿವೆ. ಅಷ್ಟೆ ಏಕೆ, ಟೆಲಿಕಾಂ ಕಂಪನಿಗಳು ತಂತ್ರಜ್ಞಾನದಲ್ಲಿ ದಿನ ದಿನವೂ ಒಂದೊಂದೇ ಹೆಜ್ಜೆ ಮುಂದಿಡುತ್ತಲೂ ಇವೆ. ಜಿಯೋ ಇಂತಹ ಹೊಸ ಸಾಧ್ಯತೆ ತೆರೆಯುವಲ್ಲಿ ಮೊದಲ ಸ್ಥಾನದಲ್ಲಿದೆ.

ಎಲ್ಟಿಇ ಮತ್ತು ವಾಯ್ಸ ಓವರ್ ಎಲ್ಟಿಇ ಎಂಬ ಟೆಕ್ನಾಲಜಿಯನ್ನು ಅವದಿಗೂ ಮೊದಲೇ ಪರಿಚಯಿಸಿ ಯಶಸ್ವಿಯಾದ ಜಿಯೋಯಿಂದಾಗಿ 2019ನೇ ವರ್ಷದಲ್ಲಿ ಟಿವಿ ಮಾರುಕಟ್ಟೆ ಕೂಡ ಭಾರೀ ಬದಲಾಗಲಿದೆ. ಜನರು ಡೇಟಾ ಬಳಸಿ ಟಿವಿ ವೀಕ್ಷಿಸುವ ಕನಸು ನನಸಾಗಲಿದೆ. ಆದರೆ, ಇದಕ್ಕೆ ಪಾವತಿಸಬೇಕಾದ ಹಣ ಮಾತ್ರ ಈಗ ನಾವು ಕೇಬಲ್ ಸಂಪರ್ಕ ನೀಡುವವರಿಗೆ ಪಾವತಿಸುವ ಹಣಕ್ಕಿಂತ ಕಡಿಮೆ ಇರಲಿದೆ.

ಇಎಂಬಿಎಂಎಸ್ ಎಂಬ ತಂತ್ರಜ್ಞಾನ

ಮೊಬೈಲ್ ನೆಟ್ವರ್ಕ್ ಮಾತ್ರ ಬಳಸಿಕೊಂಡು ಟಿವಿ ಚಾನೆಲ್‍ಗಳನ್ನು ಪ್ರಸಾರ ಮಾಡುವ ಇಎಂಬಿಎಂಎಸ್ ಎಂಬ ಇನ್ನೊಂದು ತಂತ್ರಜ್ಞಾನವನ್ನು ಬಳಸಲು ಜಿಯೋ ಪಣತೊಟ್ಟಿದೆ. ಟೆಲಿಕಾಂ ನೆಟ್‍ವರ್ಕ್ ಅನ್ನೇ ಒನ್ ವೇ ಕಮ್ಯೂನಿಕೇಶನ್‍ಗೆ ಪರಿವರ್ತಿಸುವ ತಂತ್ರಜ್ಞಾನ ಇದಾಗಿದ್ದು, ಈ ತಂತ್ರಜ್ಞಾನ ಪರಿಪೂರ್ಣವಾಗಿ ಅಳವಡಿಯಾದರೆ, ಕೇಬಲ್ ಟಿವಿ ಮಾರುಕಟ್ಟೆ ಜೊತೆಗೆ ಡಿಶ್ ಟಿವಿ ಮಾರುಕಟ್ಟೆ ಕೂಡ ಪಾತಾಳಕ್ಕಿಳಿಯುವ ಸೂಚನೆ ಲಭ್ಯವಾಗಿದೆ. ಈಗಾಗಲೇ ಜಿಯೋ ಫೈಬರ್ ಕೇಬಲ್ ಮೂಲಕ ಮನೆ-ಮನೆಗಳಿಗೆ ಇಂಟರ್‍ನೆಟ್, ಕೇಬಲ್ ಟಿವಿ ಮತ್ತು ಫೋನ್ ಸಂಪರ್ಕ ನೀಡಲು ಸಜ್ಜಾಗಿದ್ದು ಇದಕ್ಕಾಗಿಯೇ ಡೆನ್ ಮತ್ತು ಹಾಥ್ ವೇ ಕಂಪೆನಿಗಳ ಹೆಚ್ಚಿನ ಷೇರುಗಳನ್ನು ಖರೀದಿಸಿದೆ.

ಅತ್ಯಂತ ಕಡಿಮೆ ವೆಚ್ಚ : ಟಿವಿ ವೀಕ್ಷಣೆಗೆ ಹೆಚ್ಚು ಡೇಟಾ ಬೇಕಾಗುತ್ತದೆ. ಇನ್ನು ಟಿವಿಯಲ್ಲಿ ಜನರು ಡೇಟಾ ಬಳಸಿ ಟಿವಿ ವೀಕ್ಷಿಸಬೇಕು ಎಂದಾದರೆ ಅದಕ್ಕೆ ಟೆಲಿಕಾಂ ಕಂಪನಿಗಳು ಭಾರೀ ಪ್ರಮಾಣದಲ್ಲಿ ಮೂಲಸೌಕರ್ಯವನ್ನು ಒದಸಬೇಕಾಗುತ್ತದೆ. ಟವರ್‍ನಿಂದ ಟವರ್‍ಗೆ ಒಎಫ್ಸಿ ಜಾಲ, ಆಪ್ಟಿಕಲ್ ಫೈಬರ್ ನೆಟ್‍ವರ್ಕ್ ಜಾಲ ಹಾಗೂ ಟವರ್‍ಗಳ ಸಾಮಥ್ರ್ಯವನ್ನು ಹೆಚ್ಚಿಸಬೇಕಾಗುತ್ತದೆ. ಈ ವ್ಯವಸ್ಥೆಯನ್ನು ಇನ್ನಷ್ಟು ವ್ಯಾಪಕವಾಗಿ ವಿಸ್ತರಿಸಲು ಮೂಲಸೌಕರ್ಯ ಮಿತಿಗಳು ಅಡ್ಡಿಯಾಗುತ್ತಿವೆ.

ಕೇಬಲ್‍ಗಿಂತ ಕಡಿಮೆ ದರ : ಈಗಾಗಲೇ ಫೈಬರ್ ಟು ದಿ ಹೋಮ್ ಮೂಲಕ ಹವಾ ಎಬ್ಬಿಸಿರುವ ಜಿಯೋ, ಟಿವಿ ಮಾರುಕಟ್ಟೆಯಲ್ಲಿ ಮತ್ತೊಂದು ಬದಲಾವಣೆಯನ್ನು ತರಲಿದೆ. ಈ ತಂತ್ರಜ್ಞಾನ ಟಿವಿ ವಲಯದಲ್ಲಿ ಕ್ರಾಂತಿಕಾರಕ ಬದಲಾವಣೆಯಾಗಲಿದೆ. 100 ರಿಂದ 200 ರೂಪಾಯಿಗಳಲ್ಲಿ ನಿಮ್ಮ ಮನೆಗೆ ಕೇಬಲ್ ಸಂಪರ್ಕ ಸಿಗಲಿದೆ. ಕೇವಲ ಎರಡು ವರ್ಷಗಳಲ್ಲೇ ಭಾರತದ ಟೆಲಿಕಾಂನಲ್ಲಿ ಜಿಯೋ ನಿರ್ಮಿಸಿರುವ ದಾಖಲೆಗಳನ್ನು ಸಹ ಜಿಯೋ ಪ್ರಕಟಿಸಿದೆ. ಹಾಗಾದರೆ, ಜಿಯೋ ಈ ಎರಡು ವರ್ಷಗಳಲ್ಲಿ ಸಾಧಿಸಿರುವುದೇನು ?

ಪ್ರಪಂಚದ ಅತಿದೊಡ್ಡ ಸಂಪೂರ್ಣ ಐಪಿ ಜಾಲ: ಅತ್ಯುನ್ನತ ತಂತ್ರಜ್ಞಾನ ಬಳಸುವ ಸಂಪೂರ್ಣ ಐಪಿ ಜಾಲದ ಬೆಂಬಲ, 800 ಮೆಗಾಹಟ್ರ್ಸ್, 1800 ಮೆಗಾಹಟ್ರ್ಸ್ ಹಾಗೂ 2300 ಮೆಗಾಹಟ್ರ್ಸ್ ಬ್ಯಾಂಡುಗಳನ್ನು ವ್ಯಾಪಿಸಿರುವ ಎಲ್ಟಿಇ ತರಂಗಗುಚ್ಛ (ಸ್ಪೆಕ್ಟ್ರಂ) ಹಾಗೂ ಅತಿದೊಡ್ಡ ಫೈಬರ್ ಹೆಜ್ಜೆಗುರುತಿನೊಡನೆ ಜಿಯೋ ಭಾರತದ ಬೇರೆಲ್ಲ ಟೆಲಿಕಾಂ ಸಂಸ್ಥೆಗಳಿಗಿಂತ ದೊಡ್ಡದಾದ ಎಲ್ಟಿಇ ಪ್ರಸಾರವ್ಯಾಪ್ತಿಯನ್ನು ಹೊಂದಿದೆ.

ಡಿಜಿಟಲ್ ಇಕೋಸಿಸ್ಟಂನ ಭಾರೀ ಬೆಳವಣಿಗೆ: ಜಿಯೋ ಪ್ರಾರಂಭದ ನಂತರ ಫೇಸ್ಬುಕ್, ಯೂಟ್ಯೂಬ್ ಸೇರಿದಂತೆ ಎಲ್ಲ ಪ್ರಮುಖ ಸೋಶಿಯಲ್ ಮೀಡಿಯಾ ವೇದಿಕೆಗಳ ಭಾರತೀಯ ಬಳಕೆದಾರರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಜಿಯೋ ಪ್ರಾರಂಭದ ಮೊದಲ ವರ್ಷದಲ್ಲೇ ಸುಮಾರು 70 ಮಿಲಿಯನ್ ಹೊಸ ಬಳಕೆದಾರರನ್ನು ಪಡೆದಿರುವ ಗೂಗಲ್ ಹಾಗೂ ಫೇಸ್ಬುಕ್ ಪಾಲಿಗೆ ಭಾರತ ಅತ್ಯಂತ ಸಕ್ರಿಯ ಮಾರುಕಟ್ಟೆಯಾಗಿ ಪರಿಣಮಿಸಿದೆ. ದೇಶದ ಡಿವೈಸ್ ಇಕೋಸಿಸ್ಟಂ ವೇಗವರ್ಧನೆ: ದೇಶಿಯ ಬ್ರಾಡ್ ಬ್ಯಾಂಡ್ ಮಾರುಕಟ್ಟೆಯಲ್ಲಿ ಹೊಸ ಸಾಧ್ಯತೆಯನ್ನು ತೋರಿಸಿಕೊಡಲು ಮುಂದಾಗಿರುವ ಜಿಯೋ, ಇದಕ್ಕಾಗಿಯೇ ರಿಲಯನ್ಸ್ ಜಿಯೋ ಗಿಗಾ ಫೈಬರ್ ಸೇವೆಯನ್ನು ತಂದು ಲಾಂಚ್ ಮಾಡಲು ಮುಂದಾಗಿದೆ. ಜಿಯೋ ಗಿಗಾ ಫೈಬರ್‍ವೊಂದನ್ನು ಪಡೆದುಕೊಂಡರೆ ಸಾಕು ಬಳಕೆದಾರರಿಗೆ ಗಿಗಾ ಖಿಗಿ ಮತ್ತು ಸ್ಮಾರ್ಟ್ ಹೋಮ್‍ಗಳನ್ನು ಲಾಂಚ್ ಮಾಡಲಿದೆ. ರಿಲಯನ್ಸ್ ರೀಟೈಲ್‍ನಿಂದ ವಿಒಎಲ್ಟಿಇ ಅಂತರ್ಗತ ಐಙಈ ಸಾಧನಗಳನ್ನು ಬಿಡುಗಡೆ ಮಾಡಿದುದರಿಂದ, ಸ್ಮಾರ್ಟ್‍ಫೋನ್ ಬ್ರಾಂಡ್‍ಗಳೆಲ್ಲವೂ ಎಲ್ಟಿಇ ಶಿಪ್ಮೆಂಟ್ಗಳ ಮೇಲೆ ಗಮನವನ್ನು ಕೇಂದ್ರೀಕರಿಸು ವಂತಾಯಿತು. ಇದರಿಂದಾಗಿ ಈಗ ದೇಶದಲ್ಲಿ ಬಳಕೆಯಾಗುತ್ತಿರುವ ಎಲ್ಲ ಸ್ಮಾರ್ಟ್‍ಫೋನ್ ಶಿಪ್‍ಮೆಂಟ್‍ಗಳು ಎಲ್ಟಿಇ ಸಾಧನಗಳಾಗಿ ಬದಲಾಗಿರುವ ಸ್ಥಿತಿ ನಿರ್ಮಾಣವಾಗಿದೆ.

ಲಾಭಗಳು: ಒಂದೇ ಒಂದು ಜಿಯೋ ಗಿಗಾ ಫೈಬರ್‍ನಿಂದಾಗಿ ಬಳಕೆದಾರರಿಗೆ ಹೆಚ್ಚಿನ ಲಾಭವಾಗಲಿದೆ. ಜಿಯೋ ಗಿಗಾ ಫೈಲರ್ ರೌಟರ್ ಮತ್ತು ಗಿಗಾ ಟಿವಿ ಸೆಟಪ್ ಬಾಕ್ಸ್‍ಅನ್ನು ನೀಡಲಿದೆ. ಇದರಿಂದಾಗಿ ನೆಟ್ ಕನೆಕ್ಟಿವಿಟಿ ಅನ್ನು ಪಡೆದುಕೊಳ್ಳಬಹುದಾಗಿದೆ ಅಲ್ಲದೆ ವೇಗವ ನೆಟ್ ಅನ್ನು ಪಡೆದುಕೊಳ್ಳಬಹುದಾಗಿದೆ. ಅಲ್ಲದೆ ಉಚಿತ ಟಿವಿ ಸೇವೆಯೂ ದೊರೆಯಲಿದೆ. ಬಳಕೆದಾರರು 600ಕ್ಕೂ ಅಧಿಕ ಟಿವಿ ಚಾನಲ್‍ಗಳನ್ನು ಉಚಿತವಾಗಿ ನೋಡಬಹುದಾಗಿದೆ. ಇದಲ್ಲದೇ ಜಿಯೋ ಆಪ್‍ಗಳನ್ನು ಬಳಕೆಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ.

ವರ್ಚುವಲ್ ರಿಯಲ್ಟಿ: ಇದಲ್ಲದೇ ಮುಖೇಶ್ ಅಂಬಾನಿ ಜಿಯೋ ಗಿಗಾ ಫೈಬರ್ ಸೇವೆಯೊಂದಿಗೆ ವರ್ಚುವಲ್ ರಿಯಲ್ಟಿ ಸೇವೆಯನ್ನು ನೀಡಲಿದೆ ಎನ್ನಲಾಗಿದೆ. ಇದರಲ್ಲಿ ಊಆ ವಿಡಿಯೋಗಳನ್ನು ನೋಡುವ ದೊಂದಿಗೆ ಗಿಖ ಕಂಟೆಂಟ್‍ಗಳನ್ನು ನೋಡುವ ಅವಕಾಶವನ್ನು ಮಾಡಿಕೊಡ ಲಿದೆ. ಸ್ಮಾರ್ಟ್ ಹೋಮ್: ಇದಲ್ಲದೇ ಜಿಯೋ ಗಿಗಾ ಫೈಬರ್‍ನೊಂದಿಗೆ ಸ್ಮಾರ್ಟ್ ಹೋಮ್ ವಸ್ತುಗಳನ್ನು ಬಳಕೆ ಮಾಡಿಕೊಳ್ಳುವ ಅವಕಾಶವನ್ನು ನೀಡಲಿದೆ. ಇದರಿಂದಾಗಿ ವೇಗದ ಇಂಟರ್ನೆಟ್ ಅನ್ನು ಬಳಕೆ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಡಲಿದೆ. ಇದಕ್ಕಾಗಿಯೇ ವೇಗದ ಸೇವೆಯೂ ಲಭ್ಯವಿರಲಿದೆ. ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಪ್ರಭಾವವನ್ನು ಹೊಂದಿರುವ ಟಾಪ್ ಟೆನ್ ಕಂಪನಿಗಳಲ್ಲಿ ಗೂಗಲ್ ಮತ್ತು ಅಮೆಜಾನ್ ಮೊದಲ ಎರಡು ಸ್ಥಾನಗಳಲ್ಲಿ ಕಾಣಿಸಿಕೊಂಡಿದೆ. ಇದೇ ಮಾದರಿಯಲ್ಲಿ ರಿಲಯನ್ಸ್ ಜಿಯೋ ಮೂರನೇ ಸ್ಥಾನದಲ್ಲಿದೆ. ಫೇಸ್ಬುಕ್ ಅನ್ನು ಮೀರಿಸಿರುವ ಜಿಯೋ ಮೂರನೇ ಸ್ಥಾನದಲ್ಲಿದೆ. ಫೇಸ್ಬುಕ್ 4ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

(ವಿವಿಧ ಮೂಲಗಳಿಂದ) - ಕೋವರ್ ಕೊಲ್ಲಿ ಇಂದ್ರೇಶ್