ನಾಪೋಕ್ಲು : ಜ.5 ಸ್ಥಳೀಯ ಸರ್ಕಾರಿ ಪ್ರೌಢಶಾಲೆ ವತಿಯಿಂದ ಗ್ರಾಹಕರ ಜಾಗೃತಿ ಜಾಥಾ ಏರ್ಪಡಿಸಲಾಗಿತ್ತು. ಶಾಲಾ ಗ್ರಾಹಕರ ಕ್ಲಬ್ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷÀಕರು ಮತ್ತು ಪೊಲೀಸ್ ಸಿಬ್ಬಂದಿಗಳÀು ಪಾಲ್ಗೊಂಡಿದ್ದರು. ನಾಪೋಕ್ಲು ಪಟ್ಟಣದಲ್ಲಿ ತೆರಳಿದ ಜಾಥಾ ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಿತು. ಯಾವದೇ ಸಂದರ್ಭದಲ್ಲಿ ಗ್ರಾಹಕ ಎಚ್ಚರಿಕೆ ವಹಿಸುವಂತೆ, ಖರೀದಿಗೆ ಅಗತ್ಯವಾಗಿ ರಶೀದಿ ಪಡೆದುಕೊಳ್ಳುವಂತೆ ಮತ್ತು ಯಾವದೇ ಸಮಸ್ಯೆಯಾದರೆ ಗ್ರಾಹಕರ ವೇದಿಕೆಯ ಗಮನಕ್ಕೆ ತರುವಂತೆ ಅರಿವು ಮೂಡಿಸಲಾಯಿತು.
ಈ ವೇಳೆ ಗ್ರಾಹಕರ ಹಕ್ಕುಗಳ ಬಗ್ಗೆ ಶಿಕ್ಷÀಕ ಸದಾನಂದ ಮಾಹಿತಿ ನೀಡಿದರು