ಗುಡ್ಡೆಹೊಸೂರು, ಜ. 5: ಗುಡ್ಡೆಹೊಸೂರಿನಿಂದ ಸಿದ್ದಾಪುರ ರಸ್ತೆಯ ಒಟ್ಟು 10 ಕಿ.ಮೀ. ರಸ್ತೆಯ ಮರು ಡಾಮರೀಕರಣ ಮತ್ತು ರಸ್ತೆಯ ಕೊನೆಯ ಭಾಗದಿಂದ ತಲಾ ಎರಡು ಬದಿಯಲ್ಲಿ 3ಮೀ ರಸ್ತೆಯನ್ನು ವಿಸ್ತರಿಸುವ ಕಾಮಗಾರಿ ನಡೆಯಲಿದೆ. ಸರ್ವೆ ಕಾರ್ಯ ನಡೆಸುತ್ತಿರುವ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ದುಬಾರೆಯ ಪ್ರವಾಸಿತಾಣಕ್ಕೆ ಅಧಿಕ ಪ್ರವಾಸಿಗರು ಆಗಮಿಸುವ ಸಂದರ್ಭ ಭಾರೀ ವಾಹನ ದಟ್ಟಣೆ ಹಿನ್ನೆಲೆ ಈ ಕಾಮಗಾರಿ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.