ಶನಿವಾರಸಂತೆ, ಜ. 4: ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳಾರಳ್ಳಿ ಗ್ರಾಮದ ಗದ್ದೆಯೊಂದರಲ್ಲಿ ಕರುಗಳು ಬೆಳೆ ತಿಂದು ನಾಶಪಡಿಸಿವೆ ಎಂದು ಅವುಗಳ ಮಾಲೀಕನ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ಮಾಡಿದ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ.
ಬೆಳಾರಳ್ಳಿ ಗ್ರಾಮದ ತ್ರೀಣೇಶ್ ಎಂಬವರಿಗೆ ಸೇರಿದ ಹಸುವಿನ 2 ಕರುಗಳು ಬೆಳಾರಳ್ಳಿಯ ಶಿವರಾಜು ಎಂಬವರ ಜಮೀನಿಗೆ ತೆರಳಿದ್ದು, ಸಂಜೆ ತ್ರೀಣೇಶ್ ಕರುಗಳನ್ನು ಕರೆದೊಯ್ಯುತ್ತಿದ್ದಾಗ ದಾರಿ ಮಧ್ಯೆ ಆರೋಪಿ ಶಿವರಾಜು ಎಂಬಾತ ನಿಮ್ಮ ಕರುಗಳು ನಮ್ಮ ಗದ್ದೆಯ ಬೆಳೆಯನ್ನು ತಿಂದು ಹಾಳು ಮಾಡಿದೆ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿರುವದಾಗಿ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.