ಮಡಿಕೇರಿ, ಜ. 1: ಚೆಟ್ಟಳ್ಳಿ ಪ್ರೌಢಶಾಲೆಯ ಕ್ರೀಡೋತ್ಸವ ಕಾರ್ಯಕ್ರಮ ತಾ. 4 ರಂದು ಬೆಳಿಗ್ಗೆ 9.30 ರಿಂದ ನಡೆಯಲಿದ್ದು, ಇಂಡೋಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್‍ನ ಹರೀಶ್ಚಂದ್ರ ಕೆ.ಎ. ಅವರು ಉದ್ಘಾಟಿಸಲಿದ್ದಾರೆ. ಅಪರಾಹ್ನ 2.30ಕ್ಕೆ ಸಭಾ ಕಾರ್ಯಕ್ರಮ ಆಡಳಿತ ಮಂಡಳಿ ಅಧ್ಯಕ್ಷ ಪೇರಿಯನ ಪಿ. ಜಯಾನಂದ ಅವರ ಅಧ್ಯಕ್ಷತೆಯಲ್ಲಿ ಜರುಗಲಿದೆ.