ಗೋಣಿಕೊಪ್ಪಲು, ಜ. 2: ವಿವಿಧ ಭಾಷೆ, ಸಂಸ್ಕøತಿಗಳು ಭಾರತದ ಶ್ರೀಮಂತಿಕೆ ಹೆಚ್ಚಾಗಲು ಕಾರಣ ಸರ್ವ ಜನಾಂಗಗಳನ್ನು ಪರಸ್ಪರ ಗೌರವಿಸುವ ಮೂಲಕ ಭಾರತೀಯತೆ ಯನ್ನು ಗೌರವಿಸಬೇಕೆಂದು ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಕರೆ ನೀಡಿದರು.

ಇಲ್ಲಿನ ಕಾವೇರಿ ಹಿಲ್ಸ್ ಬಡಾವಣೆಯ ಕಾವೇರಿ ಸಂಘದ ವತಿಯಿಂದ ಹೊಸ ವರ್ಷಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೊಸ ವರ್ಷ ಕೇವಲ ಆಡಂಬರದ ಆಚರಣೆ ಯಾಗದೆ, ಸಮಾಜಕ್ಕೆ ನಮ್ಮಿಂದಾಗುವ ಕೊಡುಗೆ ನೀಡಿ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು.

ಇದೇ ಸಂದರ್ಭ ಬಡತನ ದಲ್ಲಿರುವ ಬಡಾವಣೆಯ ಒಬ್ಬ ವಿದ್ಯಾರ್ಥಿಗೆ ಶೈಕ್ಷಣಿಕವಾಗಿ ಒಂದು ವರ್ಷ ದತ್ತು ತೆಗೆದುಕೊಂಡು ಶಿಕ್ಷಣ ನೀಡಲಾಗುವದು ಎಂದು ಘೋಷಣೆ ಮಾಡಿದರು. ಸಂಘದ ನಿಕಟಪೂರ್ವ ಅಧ್ಯಕ್ಷ ತಿರುನೆಲ್ಲಿಮಾಡ ಜೀವನ್ ಪ್ರಾಸ್ತಾವಿಕವಾಗಿ ಮಾತನಾಡಿ, ನಗರದಲ್ಲಿ ಸಂಘ ಉತ್ತಮ ಕಾರ್ಯಚಟುವಟಿಕೆ ಮೂಲಕ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ ಎಂದರು.

ಈ ಸಂದರ್ಭ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿ.ಟಿ ಶ್ರೀನಿವಾಸ್, ಉರಗ ರಕ್ಷಕ ಶರತ್ ಕಾಂತ್, ಪತ್ರಿಕಾ ರಂಗದ ಸಾಧನೆಗಾಗಿ ರಮೇಶ್ ಕುಟ್ಟಪ್ಪ, ಕಾವೇರಿ ಸಂಘದ ನಿಕಟಪೂರ್ವ ಅಧ್ಯಕ್ಷ ಟಿ.ಬಿ. ಜೀವನ್ ಅವರನ್ನು ಗೌರವಿಸಲಾಯಿತು.

ಸನ್ಮಾನ ಪಡೆದ ಶ್ರೀನಿವಾಸ್ ಬಡಾವಣೆಯ ಇಬ್ಬರಿಗೆ ಉಚಿತ ಸಂಗೀತ ಶಿಕ್ಷಣ ನೀಡಲಾಗುವದು ಎಂದು ಹೇಳಿದರು. ಬಲ್ಲಡಿಚಂಡ ಪೊನ್ನಪ್ಪ ಸ್ಮರಣಾರ್ಥ ಆಯೋಜಿಸಿದ್ದ ಆಟೋಟ ಸ್ಪರ್ಧೆ ಹಾಗೂ ಹೊನಲು ಬೆಳಕಿನ ಶಟಲ್ ಬ್ಯಾಡ್ಮಿಂಟನ್ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಬಡಾವಣೆಯ ನೂರಾರೂ ಪುಟಾಣಿಗಳು ವೇದಿಕೆಯಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ನೀಡಿದರು. ಮಧ್ಯರಾತ್ರಿ 12 ಗಂಟೆಗೆ ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು. ಸಂಘದ ಅಧ್ಯಕ್ಷ ಥೋಮಸ್ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಖಜಾಂಜಿ ಚೋನಿರ ಸತ್ಯ, ಗ್ರಾ.ಪಂ ಸದಸ್ಯೆ ಪ್ರಭಾವತಿ, ಬಿ.ಎನ್ ಪ್ರಕಾಶ್, ಉಪಾಧ್ಯಕ್ಷ ಅನಿಲ್, ಕಾರ್ಯದರ್ಶಿ ರಫೀಕ್, ನಿರ್ದೇಶಕರಾದ ರವಿ, ರಾಜು, ಪ್ರಶಾಂತ್, ಹರೀಶ್, ಅಜ್ಜಿಕುಟ್ಟೀರ ದೇವಯ್ಯ, ಹ್ಯಾನ್ಸಿ, ಹಮೀದ್ ಇದ್ದರು.