ಗೋಣಿಕೊಪ್ಪ, ಜ. 2: ಮಹಾತ್ಮಗಾಂಧಿ ರಾಷ್ಟ್ರಿಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ರೂ. 4 ಲಕ್ಷ ವೆಚ್ಚದಲ್ಲಿ ನಿರ್ಮಾಣ ವಾದ ಕಾಂಕ್ರಿಟ್ ರಸ್ತೆಯನ್ನು ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟನೆ ಮಾಡಿದರು. ಬಲ್ಯಮಂಡೂರು ಗ್ರಾ.ಪಂ. ವ್ಯಾಪ್ತಿಯ ನಿವಾಸಿಗಳಾದ ಮಹೇಂದ್ರ, ಚಂದ್ರ, ಉದಯಕುಮಾರ, ರವಿ ಕುಟುಂಬಸ್ಥರ ರಸ್ತೆಗೆ ಕಾಂಕ್ರಿಟ್ ಹಾಕುವ ಮೂಲಕ ಕಾಲೋನಿಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಅನುದಾನದಲ್ಲಿ ಹಂತಹಂತವಾಗಿ ಹಣ ಬಿಡುಗಡೆಗೊಳಿಸಿ ಕಾಲೋನಿಗಳ ಅಭಿವೃದ್ಧಿಗೆ ಮುಂದಾಗುವದಾಗಿ ಕೆ.ಜಿ. ಬೋಪಯ್ಯ ಹೇಳಿದರು.

ಈ ಸಂದರ್ಭ ಬಲ್ಯಮಂಡೂರು ಗ್ರಾ.ಪಂ. ಅಧ್ಯಕ್ಷ ಖುಷಿಕುಮಾರ್, ಬಿ.ಜೆ.ಪಿ. ಸ್ಥಾನೀಯ ಸಮಿತಿ ಅಧ್ಯಕ್ಷ ಚಿಂಡಮಾಡ ಮಂದಣ್ಣ, ವಿಎಸ್ ಎಸ್‍ಎನ್ ಅಧ್ಯಕ್ಷ ದಾಯಂಡ ಅಯ್ಯಣ್ಣ, ಗ್ರಾ.ಪಂ. ಮಾಜಿ ಅಧ್ಯಕ್ಷರುಗಳಾದ ಕಟ್ಟೆಂಗಡ ಪ್ರಕಾಶ್, ಮಾಚಿಮಡ ಅಚ್ಚಪ್ಪ ಹಾಜರಿದ್ದರು.