ಮಡಿಕೇರಿ, ಜ.1: ಅಲ್ಪಸಂಖ್ಯಾತರ ನಿರ್ದೇಶನಾಲಯ ವತಿಯಿಂದ 2018-19 ನೇ ಸಾಲಿಗೆ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ಅಲ್ಪಸಂಖ್ಯಾತ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಪಾರ್ಸಿ, ಜೈನ್, ಬೌದ್ಧ ಸಮುದಾಯದ ಯುವಕ, ಯುವತಿಯರಿಗೆ ವಿವಿಧ ಕೋರ್ಸುಗಳಲ್ಲಿ 3 ರಿಂದ 4 ತಿಂಗಳ ಉಚಿತ ತರಬೇತಿ ನೀಡಲು ಆನ್‍ಲೈನ್‍ನಲ್ಲಿ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ತಾ. 10 ರವರೆಗೆ ಕಾಲಾವಕಾಶ ನೀಡಲಾಗಿದೆ. ಅಗತ್ಯ ಮಾಹಿತಿಗೆ ಇಲಾಖಾ ವೆಬ್‍ಸೈಟ್ hಣಣಠಿs://goಞಜom.ಞಚಿಡಿ.ಟಿiಛಿ.iಟಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, “ಮಾಹಿತಿ ಕೇಂದ್ರ” ಮೌಲಾನಾ ಅಜಾದ್ ಭವನ, ಎಫ್.ಎಂ.ಸಿ. ಕಾಲೇಜು ಹತ್ತಿರ, ಮಡಿಕೇರಿ ಕಚೇರಿ ದೂರವಾಣಿ ಸಂಖ್ಯೆ: 08272-220214 ನ್ನು ಸಂಪರ್ಕಿಸಬಹುದು.