ಶನಿವಾರಸಂತೆ, ಜ. 1: ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದಿಗುಂದ ಗ್ರಾಮದಲ್ಲಿ 2018ನೇ ಸಾಲಿನ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ನಡೆದ ಸಭೆಯ ಅಧ್ಯಕ್ಷತೆಯನ್ನು ಶನಿವಾರಸಂತೆ ಪೊಲೀಸ್ ಠಾಣಾಧಿಕಾರಿಗಳಾದ ಹೆಚ್.ಎಂ. ಮರಿಸ್ವಾಮಿ ವಹಿಸಿದ್ದರು.
ಅಪರಾಧಗಳನ್ನು ತಡೆಗಟ್ಟುವಲ್ಲಿ ಇತರೆ ಸಾರ್ವಜನಿಕರಿಗೆ ಮಾರ್ಗದರ್ಶನ ನೀಡಬೇಕು. ಸಾರ್ವಜನಿಕರು ಅಪರಿಚಿತ ಜನರ ಬಗ್ಗೆ ಜಾಗ್ರತೆಯಲ್ಲಿರುವದು ಹಾಗೂ ಅಪರಾಧ ತಡೆಗೆ ಪೊಲೀಸರಿಗೆ ಸಹಕರಿಸುವ ಸಂಬಂದ ಅಗತ್ಯ ಚಾಲ್ತಿಯಲ್ಲಿರುವ ಮೂಲಭೂತ ಕಾನೂನುಗಳನ್ನು ಪಾಲಿಸಿ ಕರ್ತವ್ಯಗಳನ್ನು ಗೌರವಿಸಿದಲ್ಲಿ ಅಪರಾಧಗಳನ್ನು ತಡೆಗಟ್ಟಿ ಉತ್ತಮ ಸಮಾಜ ನಿರ್ವಹಿಸಬಹುದು ಎಂದರು.
ಸಭೆಯಲ್ಲಿ ಜಿ.ಪಂ. ಮಾಜಿ ಸದಸ್ಯೆ ಗೀತಾ, ಹೊನ್ನರಾಜು, ರಜನಿ, ನಿಂಗಸ್ವಾಮಿ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಶಫೀರ್, ಹರೀಶ್, ಶಣ್ಮುಖ ನಾಯಕ್ ಹಾಜರಿದ್ದು, ಆರಂಭದಲ್ಲಿ ಎಂ.ವಿ. ಶಫೀರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಮುಳ್ಳುಸೋಗೆ
ಶನಿವಾರಸಂತೆ ಸಮೀಪದ ನಿಡ್ತ ಪಂಚಾಯಿತಿ ವ್ಯಾಪ್ತಿಯ ಮುಳೂರು ಗ್ರಾಮದಲ್ಲಿ 2018ನೇ ಸಾಲಿನ ಅಪರಾದ ತಡೆ ಮಾಸಾಚರಣೆ ಅಂಗವಾಗಿ ನಡೆದ ಸಭೆಯ ಅಧ್ಯಕ್ಷತೆಯನ್ನು ಶನಿವಾರಸಂತೆ ಪೊಲೀಸ್ ಠಾಣೆಯ ಸಿಬ್ಬಂದಿ ಎಂ.ವಿ. ಶಫೀರ್ ಅವರು ವಹಿಸಿದ್ದರು.
ಸಭೆಯಲ್ಲಿ ಗ್ರಾಮಸ್ಥರಾದ ಮನೋಹರ್, ಚಂದ್ರಶೇಖರ್, ಭಾಸ್ಕರ್ ಹಾಗೂ ಇತರರು ಪಾಲ್ಗೊಂಡಿದ್ದರು.