ಗೋಣಿಕೊಪ್ಪ ವರದಿ, ಡಿ. 30 : ಇನ್ಫೋಸಿಸ್ ಉದ್ಯೋಗಿಗಳು ಅನುಷ್ಠಾನಕ್ಕೆ ತಂದಿರುವ ಸಮರ್ಪಣ ಫೌಂಡೇಶನ್ ವತಿಯಿಂದ ವೀರಾಜಪೇಟೆ ತಾಲೂಕಿನ 15 ಸರ್ಕಾರಿ ಶಾಲೆಗಳಿಗೆ ವಿಜ್ಞಾನ ಕಿಟ್‍ಗಳನ್ನು ವಿತರಿಸಲಾಯಿತು.
ಪೊನ್ನಂಪೇಟೆ ಸರ್ಕಾರಿ ಪ್ರೌಢಶಾಲಾ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ರಾಮಕೃಷ್ಣ ಶಾರದಾ ಆಶ್ರಮ ಅಧ್ಯಕ್ಷ ಬೋಧಸ್ವರೂಪನಂದಾಜಿ ವಿತರಣೆ ಮಾಡಿದರು. ಟಿ. ಶೆಟ್ಟಿಗೇರಿ, ಪೊನ್ನಂಪೇಟೆ, ಹುದಿಕೇರಿ, ಟಿ. ಶೆಟ್ಟಿಗೇರಿ ಕಿರುಗೂರು, ಚಿನಿವಾಡ, ಬೇಗೂರು, ಬೆಳ್ಳೂರು, ಹರಿಹರ, ಗ್ಲೆನ್‍ಲೋರ್ನ, ಬಾಡಗರಕೇರಿ, ಪೊನ್ನಂಪೇಟೆ, ಬಿರುನಾಣಿ, ಗೋಣಿಕೊಪ್ಪ, ದೇವರಪುರ ಶಾಲೆಗಳಿಗೆ ಕಿಟ್ ವಿತರಿಸಲಾಯಿತು.
ವಿಜ್ಞಾನ ಶಿಕ್ಷಕರಿಗೆ ದಿನದ ತರಬೇತಿಯನ್ನು ತರಬೇತುದಾರ ಪ್ರಮೋದ್ ನೀಡಿದರು. ಫೌಂಡೇಶನ್‍ನ ಮುಖ್ಯಸ್ಥ ಮಹೇಶ್ ಮಾತನಾಡಿ, ಇದರ ಪ್ರಯೋಜನವನ್ನು ಎಲ್ಲಾ ಮಕ್ಕಳು ಹಾಗೂ ಶಾಲಾ ಶಿಕ್ಷಕರು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮರ್ಪಣ ಫೌಂಡೇಶನ್ ನಿರ್ದೇಶಕರಾದ ಜಗದೀಶ್ ಪುರೋಹಿತ್, ರಾಮಚಂದ್ರ ಮುಖ್ಯ ಶಿಕ್ಷಕ ಚಿದಾನಂದಪ್ಪ, ತಾಲೂಕು ದೈಹಿಕ ಶಿಕ್ಷಣ ಪರೀವಿಕ್ಷಕ ಪಿ.ಡಿ ರತಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಉಮಾದೇವಿ, ಪ್ರಭಾರ ಪ್ರಾಂಶುಪಾಲ ಸುರೇಶ್ ಬಾಬು, ಪೊನ್ನಂಪೇಟೆ ಸಮೂಹ ಸಂಪನ್ಮೂಲ ವ್ಯಕ್ತಿ ತಿರುನೆಲ್ಲಿಮಾಡ ಜೀವನ್ ಹಾಗೂ ರವೀಶ್ ಉಪಸ್ಥಿತರಿದ್ದರು.