ನಾಪೆÉÇೀಕ್ಲು, ಡಿ. 30: ಸ್ಥಳೀಯ ಡೆಕ್ಕನ್ ಯೂತ್ ಕ್ಲಬ್ ಮತ್ತು ಸ್ಪಾರ್ಟ ಎಫ್‍ಸಿ ವತಿಯಿಂದ ಹೊಸ ವರ್ಷದ ಅಂಗವಾಗಿ ತಾ. 31 ರಂದು (ಇಂದು) ಸಂಜೆ 5ಗಂಟೆಯಿಂದ ಬೆಳಗ್ಗಿನವರೆಗೆ ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಹೊನಲು ಬೆಳಕಿನ ಕಾಲ್ಚೆಂಡು ಪಂದ್ಯಾಟ ಆಯೋಜಿಸಲಾಗಿದೆ.

ಇದು ಹೊಸ ವರ್ಷದ ಪ್ರಾರಂಭಕ್ಕೆ ಶುಭಾಶಯದ ಪಂದ್ಯಾಟವಾಗಿದ್ದು. ಆಸಕ್ತ ತಂಡಗಳು ಅಪರಾಹ್ನ 2 ಗಂಟೆಯ ಒಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಪ್ರಥಮ ಸ್ಥಾನ ಪಡೆದ ತಂಡಕ್ಕೆ 20,019 ರೂ. ನಗದು ಮತ್ತು ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 12,019 ರೂ. ನಗದು ನೀಡಲಾಗುವದು ಎಂದು ಡೆಕ್ಕನ್ ಯೂತ್ ಕ್ಲಬ್ ಅಧ್ಯಕ್ಷ ಎಂ.ಎ.ಮನ್ಸೂರ್ ಅಲಿ ತಿಳಿಸಿದ್ದಾರೆ. ಹೆಸರು ನೋಂದಾಯಿಸಿಕೊಳ್ಳಲು ಮೊ. ಸಂಖ್ಯೆ 9590185332, 9901196916 ಅನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.