ಕೂಡಿಗೆ, ಡಿ. 29: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುಮ್ಮನಕೊಲ್ಲಿ ಒಕ್ಕೂಟದ ಸ್ವಸಹಾಯ ಸಂಘಗಳ ಸದಸ್ಯರುಗಳಿಗೆ ಪೌಷ್ಟಿಕ ಆಹಾರ ಬಳಕೆಯಿಂದಾಗುವ ಪ್ರಯೋಜನಗಳು ಹಾಗೂ ಸಿರಿದಾನ್ಯಗಳ ಬಳಕೆ, ಧರ್ಮಸ್ಥಳ ಸಿರಿಗ್ರಾಮೋದ್ಯೋಗ ಸಂಸ್ಥೆಯಿಂದ ದೊರೆಯುವ ಪುಷ್ಟಿಯ ಬಳಕೆಯಿಂದಾಗುವ ಪ್ರಯೋಜನಗಳ ಬಗ್ಗೆ ವಲಯದ ತಾಂತ್ರಿಕ ತರಬೇತಿ ಸಹಾಯಕಿ ಪ್ರಿಯಾದರ್ಶಿನಿ ಮಾಹಿತಿ ನೀಡಿದರು. ಗುಮ್ಮನಕೊಲ್ಲಿ ಒಕ್ಕೂಟದ ಅಧ್ಶಕ್ಷೆ ವನಿತಾ, ಸಂಘದ ಸದಸ್ಯರು ಉಪಸ್ಥಿತರಿದ್ದರು. ಸೇವಾಪ್ರತಿನಿಧಿ ಸುವರ್ಣ ತರಬೇತಿ ಸಂಘಟಿಸಿದರು.