ಶನಿವಾರಸಂತೆ, ಡಿ. 28: ಹಿಂದೂ ರುದ್ರಭೂಮಿ ಅಭಿವೃದ್ಧಿ ಸೇವಾ ಸಮಿತಿ ಹಾಗೂ ಗ್ರಾಮಸ್ಥರ ವತಿಯಿಂದ ಪಟ್ಟಣ ಸುಳುಗಳಲೆ ಕಾಲೋನಿಯ ಸಾರ್ವಜನಿಕ ಹಿಂದೂ ರುದ್ರಭೂಮಿಯ ದ್ವಾರದ ಬಲಭಾಗದಲ್ಲಿ ನೂತನವಾಗಿ ರೂ. 16 ಸಾವಿರ ವೆಚ್ಚದಲ್ಲಿ ರುದ್ರ ವಿಗ್ರಹ ಪ್ರತಿಷ್ಠಾಪಿಸಲಾಗಿದೆ. ವಿಗ್ರಹವನ್ನು ತಮಿಳುನಾಡಿನ ಶಿಲ್ಪಿ ಬಾಲಾಜಿ ನಿರ್ಮಿಸಿದ್ದಾರೆ. ಅಂತ್ಯ ಸಂಸ್ಕಾರ ಸಮಯದಲ್ಲಿ ಮಾತ್ರ ಮೊದಲಿಗೆ ರುದ್ರ ವಿಗ್ರಹಕ್ಕೆ ಪೂಜೆ ಸಲ್ಲಿಸುವ ಸಂಪ್ರದಾಯವಿದೆ. ಶೀಘ್ರದಲ್ಲೇ ದ್ವಾರದ ಎಡಭಾಗದಲ್ಲಿ ರಾಜ ಹರೀಶ್ಚಂದ್ರನ ವಿಗ್ರಹ ನಿರ್ಮಿಸಲಾಗುವದು ಎಂದು ಸಮಿತಿ ಪದಾಧಿಕಾರಿ ಮನು ತಿಳಿಸಿದ್ದಾರೆ.