ಮಡಿಕೇರಿ, ಡಿ. 27: ನಲ್ಲೂರು ಗ್ರಾಮದ ಪುಚ್ಚಿಮಾಡ ದೇವಯ್ಯ ಅವರ ಜಮೀನಿನಲ್ಲಿ ಬಾಳೆ ಬೆಳೆಯ ಕ್ಷೇತ್ರೋತ್ಸವವನ್ನು ವಿಸ್ತರಣಾ ಶಿಕ್ಷಣ ಘಟಕ ಮಡಿಕೇರಿ ವತಿಯಿಂದ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ನಲ್ಲೂರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿ ಮಾಹಿತಿ ಪಡೆದುಕೊಂಡರು. ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ಥ ಡಾ. ಆರ್.ಎನ್. ಕೆಂಚರೆಡ್ಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಸ್ತರಣಾ ಶಿಕ್ಷಣ ಘಟಕದ ಬೇಸಾಯ ಶಾಸ್ತ್ರದ ವಿಭಾಗ ಸಹಪ್ರಾಧ್ಯಾಪಕ ಡಾ. ಬಸವಲಿಂಗಯ್ಯ ಅವರು ಬಾಳೆಯ ಬೇಸಾಯ ಕ್ರಮಗಳ ಬಗ್ಗೆ ಹಾಗೂ ಪೆÇನ್ನಂಪೇಟೆಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಡಾ. ಜಿ.ಎನ್. ಹೊಸಗೌಡರ್ ಬಾಳೆಯಲ್ಲಿ ಬರುವ ರೋಗಗಳ ಬಗ್ಗೆ ಹಾಗೂ ಅವುಗಳ ನಿಯಂತ್ರಣದ ಬಗ್ಗೆ ಮಾಹಿತಿ ನೀಡಿದರು.
ಪ್ರಗತಿಪರ ಕೃಷಿಕರು ಹಾಗೂ ಕೃ.ವಿ.ವಿ. ಬೆಂಗಳೂರು ಆಡಳಿತ ಮಂಡಳಿಯ ಹಿಂದಿನ ಸದಸ್ಯ ಪಿ.ಟಿ. ಪೂಣಚ್ಚ ಬಾಳೆ ಬೇಸಾಯದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಪ್ರಗತಿಪರ ಕೃಷಿಕರಾದ ಹೇಮಂತ್, ಸೋಮೇಂಗಡ ತಿಮ್ಮಯ್ಯ ಹಾಗೂ ಗೋಣಿಕೊಪ್ಪ ಆರ್.ಎಂ.ಸಿ. ಅಧ್ಯಕ್ಷ ವಿನು ಚಂಗಪ್ಪ ಬಾಳೆ ಬೆಳೆಯಲ್ಲಿ ತಾವು ಅನುಸರಿಸುತ್ತಿರುವ ಕ್ರಮಗಳ ಬಗ್ಗೆ ಈ ಸಂದರ್ಭ ತಿಳಿಸಿದರು.