ನಾಪೋಕ್ಲು, ಡಿ. 28: ಶ್ರದ್ಧೆ ನಿಷ್ಠೆ, ಶ್ರಮ ಇವುಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಂಡಿದ್ದೇ ಆದರೆ ಯಶಸ್ಸು ಸಾಧ್ಯ. ಎಂದು ಇಲ್ಲಿನ ಶ್ರೀರಾಮಟ್ರಸ್ಟ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಹಳೆ ವಿದ್ಯಾರ್ಥಿಗಳ ಸಮಾಗಮ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಸಂಸ್ಥೆಯ ನಿವೃತ್ತ ಮುಖ್ಯ ಶಿಕ್ಷಕರಾದ ಸಿ.ಹೆಚ್. ಕೃಷ್ಣಮೂರ್ತಿ ಮಾತನಾಡಿದರು. ವಿದ್ಯಾರ್ಥಿಗಳು ಗುರುಹಿರಿಯರಿಗೆ ವಿಧೇಯರಾಗಿ ರಬೇಕು. ಬಡಬಗ್ಗರ ಬಗ್ಗೆ ಕಾಳಜಿ ವಹಿಸಿ ಸಮಾಜಮುಖಿ ಕಾರ್ಯಗಳಿಗೆ ಒತ್ತು ನೀಡುವಂತಾಗಬೇಕು ಎಂದರು. ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಡಾ. ಬೊಪ್ಪಂಡ ಜಾಲಿ ಬೋಪಯ್ಯ, ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ನಿವೃತ್ತ ಪ್ರಾಂಶುಪಾಲ ಹಾಗೂ ಹಳೆ ವಿದ್ಯಾರ್ಥಿ ಸಂಘದ ಸ್ಥಾಪಕ ಅಧ್ಯಕ್ಷ ಪ್ರೊ. ಕಲ್ಯಾಟಂಡ ಪೂಣಚ್ಚ, ಹಳೆ ವಿದ್ಯಾರ್ಥಿ ಯೂನಸ್ ಅತಿಥಿಗಳನ್ನು ಪರಿಚಯಿಸಿದರು. ವೇದಿಕೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ, ಕಾರ್ಯದರ್ಶಿ ಬಿದ್ದಾಟಂಡ ಪಾಪ ಮುದ್ದಯ್ಯ, ಟ್ರಸ್ಟಿಗಳಾದ ಅಪ್ಪಾರಂಡ ಅಪ್ಪಯ್ಯ, ಅರೆಯಡ ಸೋಮಪ್ಪ, ಕೊಂಬಂಡ ಗಣೇಶ್, ಎಂ.ಎಸ್. ಸುಬ್ರಮಣ್ಯ, ನಿವೃತ್ತ ಡಿವೈಎಸ್‍ಪಿ ಬೊಪ್ಪಂಡ ಕುಶಾಲಪ್ಪ, ನಿವೃತ್ತ ಡಿವೈಎಸ್ಪಿ ಬಿದ್ದಾಟಂಡ ಮುತ್ತಣ್ಣ, ನಾಯಕಂಡ ದೀಪು ಚೆಂಗಪ್ಪ, ಪ್ರಾಂಶುಪಾಲೆ ಬಿ.ಎಂ. ಶಾರದ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಎಂ. ಬೋಪಣ್ಣ, ಕಾರ್ಯದರ್ಶಿ ಶಾಹಿದ್, ಉಪಸ್ಥಿತರಿದ್ದು ಕಾರ್ಯಕ್ರಮದಲ್ಲಿ ಉನ್ನತ ಹುದ್ದೆ ಅಲಂಕರಿಸಿರುವ ಶಾಲೆಯ ಹಳೆ ವಿದ್ಯಾರ್ಥಿಗಳಾದ ಡಾ. ಕೇಲೇಟಿರ ಎಂ. ಬೋಪಣ್ಣ, ಪೊನ್ನೋಲತಂಡ ಕಿರಣ್ ಪೊನ್ನಪ್ಪ, ಅರೆಯಡ ಪವಿನ್ ಪೊನ್ನಣ್ಣ, ಕಲಿಯಂಡ ಮಿಲನ್ ಮಂದಣ್ಣ, ಡಾ. ನಾಮೆರ ಪೂವಯ್ಯ, ಡಾ. ಅಬೂಸಮತ್, ಡಾ. ಚೌರೀರ ಹೆಚ್. ನಿತ್ಯ, ಪುತ್ತುಮನೆ ಸೀಮಾ ಎ.ಸಿ.ಎಫ್, ಡಾ. ದಿವ್ಯ ಕೆ.ಎಸ್ ಹಾಗೂ ಮುಕ್ಕಾಟಿರ ನಿಲನ್ ಇವರನ್ನು ಗಣ್ಯರು ಸನ್ಮಾನಿಸಿ, ಶುಭಕೋರಿದ ಬಳಿಕ ಸನ್ಮಾನಿತರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಹಳೆ ವಿದ್ಯಾರ್ಥಿ ತೀರ್ಥ ನಿರೂಪಿಸಿ, ಸುಬ್ಬಮ್ಮ ವಂದಿಸಿದರು. ಬಳಿಕ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.