ವೀರಾಜಪೇಟೆ, ಡಿ. 27: ವೀರಾಜಪೇಟೆಯಿಂದ ಕೇರಳದ ಕಣ್ಣಾನೂರಿಗೆ ತೆರಳುತ್ತಿದ್ದ ಬಸ್ (ಕೆಎಲ್ 13 ಎಜಿ 4595) ಹಾಗೂ ಇರಿಟ್ಟಿಯಿಂದ ಮೈಸೂರಿನತ್ತ ತೆರಳುತ್ತಿದ್ದ ಇನ್ನೋವಾ ಕಾರು (ಕೆಎಲ್ 58 ಎನ್ 3993) ನಡುವೆ ಮಾಕುಟ್ಟಕ್ಕೆ ತೆರಳುವ ದಾರಿಯ ಹನುಮಾನ್‍ಪಾಲ ಎಂಬಲ್ಲಿನ ತಿರುವಿನಲ್ಲಿ ಅಪರಾಹ್ನ 4.45ರ ಸಮಯದಲ್ಲಿ ಡಿಕ್ಕಿ ಸಂಭವಿಸಿದ ಪರಿಣಾಮ ಕಾರಿನ ಚಾಲಕ ಮಹಮ್ಮದ್ ಸಾನಿತ್ ಹಾಗೂ ಮುಂದಿನ ಆಸನದಲ್ಲಿ ಕುಳಿತಿದ್ದ ನೆಕ್ಸನ್ ಎಂಬಿಬ್ಬರಿಗೆ ಗಂಭೀರ ಸ್ವರೂಪದ ಗಾಯ ಉಂಟಾಗಿ ಇರಿಟ್ಟಿಯ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.

ಖಾಸಗಿ ಬಸ್‍ನಲ್ಲಿ ಸುಮಾರು 40ಮಂದಿ ಪ್ರಯಾಣಿಸುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನ ಚಾಲಕ ಮಹಮ್ಮದ್ ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಪೊಲೀಸರು ಬಸ್‍ನ ಚಾಲಕ ಬಿಪಿನ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬಸ್-ಕಾರು ಡಿಕ್ಕಿಯಿಂದ ಕಾರಿನ ಮುಂಭಾಗ ಜಖಂಗೊಂಡಿದೆ.