ವೀರಾಜಪೇಟೆ, ಡಿ. 27: ಸಾಮಾಜಿಕ ಜಾಲತಾಣದಲ್ಲಿ ಕ್ರೈಸ್ತ ಧರ್ಮಕ್ಕೆ ಅವಹೇಳನ ಮಾಡುವಂತೆ ಪೋಸ್ಟ್ ಮಾಡಿರುವ ರವೀಂದ್ರ ಗೌಡ ಪಾಟೀಲ ಎಂಬಾತನನ್ನು ಬಂಧಿಸುವಂತೆ ಸಂತ ಅನ್ನಮ್ಮ ದೇವಾಲಯದ ಎದುರು ಪ್ರತಿಭಟನೆ ನಡೆಸಿದರು.

ಸಂತ ಅನ್ನಮ್ಮ ದೇವಾಲಯದ ಮುಂಭಾಗ ಕ್ರೈಸ್ತ ಮತ ಭಾಂದವರು ಇಂದು ಸಂಜೆ ಪ್ರತಿಭಟನೆ ನಡೆಸಿದರು. ಧರ್ಮಗುರು ರೆ.ಫಾ. ಮದಲೈ ಮುತ್ತು ಕಿಡಿಗೇಡಿಗಳು ಧರ್ಮಕ್ಕೆ ಅಪಪ್ರಚಾರದ ಹೀನಾ ಪ್ರವೃತ್ತಿ ಬೆಳೆಸಿಕೊಂಡು ಮುಂದುವರಿಯುತ್ತಿದ್ದಾರೆ. ಯೇಸು ಜನಿಸಿದ ಹೊಸ ವರ್ಷಾಚಾರಣೆಯನ್ನು ಆಚರಿಸುವ ಸುದಿನ ಇಂತಹ ಕೃತ್ಯವೆಸಗಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಹೇಳಿದರು.

ಪ್ರತಿಭಟನೆ ಉದ್ದೇಶಿಸಿ ಕೌನ್ಸಿಲ್ ಕಾರ್ಯದÀರ್ಶಿ ಬೆನೆಡಿಕ್ಟ್ ಸಾಲ್ಡಾನಾ ಶಾಲೆಯ ಮುಖ್ಯೋಪಾದ್ಯಾಯ ಮಾರ್ಗರೆಟ್ ಲಾಸ್ರಾದೂ ಮಾತನಾಡಿದರು.

ಪ್ರತಿಭಟನೆಯಲ್ಲಿ ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಜಾನ್ಸನ್, ಭಾ.ಜ.ಪ. ಅಲ್ಪ ಸಂಖ್ಯಾತ ಘಟಕದ ರಾಜ್ಯ ಮುಖಂಡ ಜೊಕಿಂ ರೋಡ್ರಿಗ್ರಸ್, ಪಟ್ಟಣ ಪಂಚಾಯಿತಿ ಸದಸ್ಯ ಅಗಸ್ಟಿನ್ ಬೆನ್ನಿ, ಉದ್ಯಮಿ ಮಾರ್ಟಿನ್ ಬಾರ್ನಡ್ ಮೊದಲಾದವರು ಹಾಜರಿದ್ದರು.