ಗೋಣಿಕೊಪ್ಪ ವರದಿ, ಡಿ. 28: ಪಾಲಿಬೆಟ್ಟ ಚೆಷೈರ್ ಹೋಂ ವಿಶೇಷ ಮಕ್ಕಳ ಶಾಲೆಯಲ್ಲಿ ಕ್ರಿಸ್ಮಸ್ ಪ್ರಯುಕ್ತ ಹಲವು ಕಾರ್ಯಕ್ರಮ ನಡೆಯಿತು. ವಿಶೇಷ ಮಕ್ಕಳು ಹಲವು ಸಾಂಸ್ಕøತಿಕ ಕಾರ್ಯಕ್ರಮ ನೀಡುವ ಮೂಲಕ ವಿಶೇಷತೆ ಮೂಡಿಸಿದರು.
ಮಕ್ಕಳು ಕ್ರಿಸ್ಮಸ್ ಆಚರಣೆಯಲ್ಲಿ ವಿಶೇಷ ವೇಷ ಧರಿಸಿ ಕಾರ್ಯಕ್ರಮ ನೀಡಿದರು. ಶಿಕ್ಷಕಿಯರುಗಳಾದ ವಿನಿತಾ ಹಾಗೂ ನಜೀನಾಬಾನು ಅವರ ತರಬೇತಿಯಂತೆ ಕಾರ್ಯಕ್ರಮ ರೂಪಿಸಿದರು. ಮಕ್ಕಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.
ಈ ಸಂದÀರ್ಭ ವೀರಾಜಪೇಟೆ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಿಶು ಗಣಪತಿ, ಕಾರ್ಯದರ್ಶಿ ಪ್ರಧಾನ್ ತಮ್ಮಯ್ಯ, ಖಜಾಂಚಿ ನಿಯಾಸ್, ಚೆಷೈರ್ ಹೋಂ ವ್ಯವಸ್ಥಾಪಕ ಗೀತಾ, ಪ್ರಾಂಶುಪಾಲ ಶಿವರಾಜ್ ಉಪಸ್ಥಿತರಿದ್ದರು. ಗೀತಾ ನಾಯ್ಡು ನಿರೂಪಿಸಿದರು.