ಚೆಟ್ಟಳ್ಳಿ , ಡಿ. 28: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕೊಡಗು ಜಿಲ್ಲಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ನೂತನ ಕೊಡಗು ಜಿಲ್ಲಾಧ್ಯಕ್ಷರಾಗಿ ಅಬ್ದುಲ್ ಸಲಾಂ ಕುಶಾಲನಗರ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ಇಬ್ರಾಹಿಂ ಮಡಿಕೇರಿ, ಉಪಾಧ್ಯಕ್ಷರಾಗಿ ರಾಹಿಲ್ ಮಡಿಕೇರಿ, ಜಂಟಿ ಕಾರ್ಯದರ್ಶಿಯಾಗಿ ಜುನೈದ್ ಮಡಿಕೇರಿ, ಕೋಶಾಧಿಕಾರಿಯಾಗಿ ವಾಹಿದ್ ಮಡಿಕೇರಿ ಆಯ್ಕೆಯಾಗಿದ್ದಾರೆ. ಸಮಿತಿ ಸದಸ್ಯರುಗಳಾಗಿ ಮನ್ಸೂರ್ ಕುಶಾಲನಗರ, ಅನ್ಸಾರ್ ಕುಶಾಲನಗರ, ಯೂನುಸ್ ಸೋಮವಾರಪೇಟೆ, ಅರ್ಷಾದ್ ಸೋಮವಾರಪೇಟೆ.
ಚುನಾವಣಾ ಪ್ರಕ್ರಿಯೆಯನ್ನು ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶಾಕಿರ್ ಹಾಗೂ ರಾಜ್ಯ ಸಮಿತಿ ಸದಸ್ಯರಾದ ಸುಫಿಯಾನ್ (ಮಡಿಕೇರಿ) ನಡೆಸಿದರು.