ಸೋಮವಾರಪೇಟೆ, ಡಿ. 25: ಇಲ್ಲಿನ ಪಯೋನಿಯರ್ಸ್ ಟೆನ್ನಿಸ್ ಕ್ಲಬ್ ವತಿಯಿಂದ ರನ್ನಿಂಗ್ ಫಾರ್ ಬೆಟರ್ ಟುಮಾರೋ ಎಂಬ ಘೋಷ ವಾಕ್ಯದೊಂದಿಗೆ ಬೇಳೂರು ಬಾಣೆಯಿಂದ ಪಟ್ಟಣದ ಕ್ಲಬ್ ವರೆಗೆ ಮ್ಯಾರಥಾನ್ ಆಯೋಜಿಸಲಾಗಿತ್ತು.
ಕ್ಲಬ್ ಸದಸ್ಯರು ಹಾಗೂ ವಿವಿಧ ಸೋಮವಾರಪೇಟೆ, ಡಿ. 25: ಇಲ್ಲಿನ ಪಯೋನಿಯರ್ಸ್ ಟೆನ್ನಿಸ್ ಕ್ಲಬ್ ವತಿಯಿಂದ ರನ್ನಿಂಗ್ ಫಾರ್ ಬೆಟರ್ ಟುಮಾರೋ ಎಂಬ ಘೋಷ ವಾಕ್ಯದೊಂದಿಗೆ ಬೇಳೂರು ಬಾಣೆಯಿಂದ ಪಟ್ಟಣದ ಕ್ಲಬ್ ವರೆಗೆ ಮ್ಯಾರಥಾನ್ ಆಯೋಜಿಸಲಾಗಿತ್ತು.
ಕ್ಲಬ್ ಸದಸ್ಯರು ಹಾಗೂ ವಿವಿಧ ದೀಪಿಕಾ ದ್ವಿತೀಯ ಸ್ಥಾನ ಪಡೆದರೆ , ನಿಷಾ ದಾಸ್ ತೃತೀಯ ಸ್ಥಾನ ಪಡೆದರು. ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ಕೃಷ್ಣ ಪ್ರಥಮ, ಶ್ರೇಯಸ್ ದ್ವಿತೀಯ ಹಾಗೂ ನಿಶ್ವಂತ್ ತೃತೀಯ ಸ್ಥಾನ ಗಳಿಸಿದರು.
ವಯಸ್ಕರ ವಿಭಾಗದಲ್ಲಿ ಕೆ.ಡಿ. ಕುಮಾರ, ಕೆ.ಟಿ. ಸಂದೀಪ್ ಹಾಗೂ ಸಿ.ಆರ್. ಪ್ರದೀಪ್ ಕ್ರಮವಾಗಿ ಮೂರು ಸ್ಥಾನ ಗಳಿಸಿದರು. ಮಹಿಳೆಯರ ವಿಭಾಗದಲ್ಲಿ ಬಬಿತ ಕುಮಾರ್, ಅಮೃತಾ ಕಿರಣ್ ಹಾಗೂ ಪೂಜಾ ಅವರುಗಳು ಸ್ಥಾನಗಳನ್ನು ಪಡೆದರು. ಕ್ಲಬ್ನ ಕಾರ್ಯದರ್ಶಿ ಬಿ. ನವೀನ್, ಪಯೋನಿಯರ್ಸ್ ಕ್ಲಬ್ನ ಕ್ರೀಡಾ ಕಾರ್ಯದರ್ಶಿ ಎ.ಎನ್. ಪ್ರವೀಣ್, ಜಂಟಿ ಕಾರ್ಯದರ್ಶಿ ಚಂದನ್ ಚಂದ್ರಾಜು, ಕೋಶಾಧಿಕಾರಿ ಬಿ.ಎಂ. ಸುದರ್ಶನ್, ಪದಾಧಿಕಾರಿ ಗಳಾದ ಉದಯ್ ಉದ್ದೂರಯ್ಯ, ಎಸ್.ಬಿ. ಯಶವಂತ್, ಬಿ.ಎಸ್. ಅನಂತರಾಮ್ ಮತ್ತು ರವೀಂದ್ರ ಉಪಸ್ಥಿತರಿದ್ದರು.