ಮಡಿಕೇರಿ, ಡಿ. 23: ಇತ್ತೀಚೆಗೆ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಶೆಟಲ್ ಬ್ಯಾಡ್‍ಮೆಂಟನ್‍ನ 14ರ ವಯೋಮಿತಿ ಒಳಗಿನ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದ ನಗರದ ಸಂತ ಜೋಸೆಫರ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಅಜ್ಜೇಟಿರ ಯುಕ್ತಾ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

ತಾ. 30 ರಿಂದ ಮಹಾರಾಷ್ಟ್ರದಲ್ಲಿ ನಡೆಯುವ ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ಯುಕ್ತಾ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದಾಳೆ. ಈಕೆ ಕುಶಾಲನಗರ ಗುಡ್ಡೆಹೊಸೂರಿನ ಐ.ಎನ್.ಎಸ್. ಸ್ಪೋಟ್ರ್ಸ್ ಸೆಂಟರ್‍ನಲ್ಲಿ ಐಚೆಟ್ಟಿರ ಪೊನ್ನಪ್ಪ ಹಾಗೂ ಶಾಂತಕುಮಾರ್ ಅವರಿಂದ ತರಬೇತಿ ಪಡೆಯುತ್ತಿದ್ದಾಳೆ. ಮಡಿಕೇರಿ ನಿವಾಸಿ ಅಜ್ಜೇಟ್ಟಿರ ಮೋಹನ್ (ಜೈ) ಹಾಗೂ ಮಮತಾ ದಂಪತಿಯ ಪುತ್ರಿ.