ಸೋಮವಾರಪೇಟೆ,ಡಿ.23: ನಿಯಂತ್ರಣ ಕಳೆದುಕೊಂಡ ಟ್ರ್ಯಾಕ್ಟರ್ ರಸ್ತೆಯ ಬದಿಗೆ ಮಗುಚಿ ಬಿದ್ದ ಪರಿಣಾಮ ಯುವಕನೋರ್ವ ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ಕೊಡ್ಲಿಪೇಟೆ ಸಮೀಪದ ಊರುಗುತ್ತಿ ಗ್ರಾಮದಲ್ಲಿ ಸಂಭವಿಸಿದೆ.

ಊರುಗುತ್ತಿ ಗ್ರಾಮದ ನಿವಾಸಿ ಮಂಜುನಾಥ್ ಎಂಬವರ ಪುತ್ರ, ಮದನ್ (24) ಎಂಬಾತನೇ ಸಾವನ್ನಪ್ಪಿದ ದುರ್ದೈವಿ. ತಮಗೆ ಸೇರಿದ ಟ್ರ್ಯಾಕ್ಟರ್‍ನಲ್ಲಿ ಇಂದು ಸಂಜೆ ಕೊಡ್ಲಿಪೇಟೆಯಿಂದ ಊರುಗುತ್ತಿ ಕಡೆಗೆ ತೆರಳುತ್ತಿದ್ದ ಸಂದರ್ಭ ಟ್ರ್ಯಾಕ್ಟರ್‍ನ ಬ್ರೇಕ್ ವಿಫಲಗೊಂಡು ರಸ್ತೆ ಬದಿಯಲ್ಲಿದ್ದ 11ಕೆ.ವಿ. ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ರಸ್ತೆಯ ಒಂದು ಬದಿಗೆ ಮಗುಚಿದೆ. ಈ ಸಂದರ್ಭ ಕೆಳಬಿದ್ದ ಮದನ್ ನ ಎದೆ ಭಾಗದ ಮೇಲೆ ಟ್ರ್ಯಾಕ್ಟರ್‍ನ ಚಕ್ರ ಹರಿದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನಾ ಸ್ಥಳಕ್ಕೆ ಸೋಮವಾರಪೇಟೆ ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ ಸೇರಿದಂತೆ ಸಿಬ್ಬಂದಿ ಭೇಟಿ ನೀಡಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.