ಚೆಟ್ಟಳ್ಳಿ, ಡಿ. 22: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಕೊಡವ ಮಕ್ಕಡ ಕೂಟದ ಸಂಯುಕ್ತ ಆಶ್ರಯದಲ್ಲಿ ನಡೆದ ಕೊಡವ ಸಂಸ್ಕøತಿಯ ಸ್ಪರ್ಧೆಯಲ್ಲಿ ನಾಪೋಕ್ಲು ಅಂಕೂರ್ ಪಬ್ಲಿಕ್ ಶಾಲೆ ಮೊದಲ ಹಾಗೂ ಎರಡನೇ ಚಾಂಪಿಯನ್ಸ್ ಗರಿಯನ್ನು ಪಡೆಯಿತು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಕೆ. ಪೊನ್ನಪ್ಪ ಅಧ್ಯಕ್ಷತೆಯಲ್ಲಿ ಅಂಕೂರ್ ಪಬ್ಲಿಕ್ ಶಾಲೆಯ ವೇದಿಕೆಯಲ್ಲಿ ನಡೆದ ಕೊಡವ ಜಾನಪದ ಸಾಂಸ್ಕøತಿಕ ನಮ್ಮೆಯ ಸಮಾರೋಪ ಸಮಾರಂಭದಲ್ಲಿ ಮೈಸೂರಿನ ವಕೀಲ ಸಂಘದ ಮಾಜಿ ಅಧ್ಯಕ್ಷ ಪಾಂಡಂಡ ಡಿ. ಮೇದಪ್ಪ ಮಾತನಾಡಿ, ಜನರು ಹಣದ ಹಿಂದೆ ಬಿದ್ದು ಸಂಸ್ಕøತಿ, ಅಚಾರ ವಿಚಾರ, ಪದ್ಧತಿಗಳನ್ನು ಮರೆಯುತ್ತಿರುವದರ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಕೊಡವ ಸಾಹಿತ್ಯ ಅಕಾಡೆಮಿಯಲ್ಲಿ ಈ ಹಿಂದೆ ಸೇವೆ ಸಲ್ಲಿಸಿದ ಸಂದರ್ಭ ಹಲವು ಕಾರ್ಯಕ್ರಮವನ್ನು ಮಾಡಿರುತ್ತೇವೆ ಎಂದು ಭಾಗಮಂಡಲ ತಲಕಾವೇರಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ ಹೇಳಿದರು.

ಕೊಡಗು ಪ್ರೆಸ್ಸ್‍ಕ್ಲಬ್‍ನ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಪತ್ರಿಕೆಗಳು ಮಾಧ್ಯಮದಲ್ಲಿ ಕೆಲವೊಂದು ಟೀಕೆ ಟಿಪ್ಪಣಿಗಳು ಬರುವದು ಸಹಜ. ಅದಕ್ಕೆಲ್ಲ ಹಿಂಜರಿಯದೆ ಉತ್ತಮ ಕಾರ್ಯವನ್ನು ಮಾಡುವಂತಾಗ ಬೇಕೆಂದರು.

ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಕೆ. ಪೊನ್ನಪ್ಪ ಮಾತನಾಡಿ, ಕುಂಞÂಯಡ ಸಾಂಸ್ಕøತಿಕ ನಮ್ಮೆಯಂತಹ ಕಾರ್ಯಕ್ರಮಗಳು ಪ್ರಯೋಜಕಾರಿಯಾಗಲಿದೆ ಎಂದರು.

ಕಾರ್ಯಕ್ರಮದ ಸಂಚಾಲಕ ಬೊಳ್ಳಜಿರ ಬಿ. ಅಯ್ಯಪ್ಪ ಕಾರ್ಯಕ್ರಮದ ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಯಲ್ಲಿ ಮಾತನಾಡಿ, ಕೊಡವ ಭಾಷೆ ಹಾಗೂ ಆಚಾರ ವಿಚಾರವನ್ನು ಉಳಿಸಿ ಬೆಳೆಸಲು 3 ವರ್ಷ ಕುಂಞÂಯಡ ನಮ್ಮೆಯನ್ನು ಆಚರಿಸುತ್ತಾ ಬಂದಿದ್ದು, 4ನೇ ವರ್ಷ ಅಂಕುರ್ ಪಭ್ಲಿಕ್ ಶಾಲೆಯಲ್ಲಿ ನಡೆಸಲಾಗಿದ್ದು, ಮುಂದಿನ ಪೀಳಿಗೆಗೆ ಸಹಕಾರಿಯಾಗಲಿದೆ ಎಂದರು.

ಕೊಡವ ಜನಪದ ಕ್ಷೇತ್ರದ ಸಾಧಕರಾದ ಚಿರೋಟಿರ ತಮ್ಮಯ್ಯ, ಬಾಳೆಯಡ ಉತ್ತಪ್ಪ, ಕೈಬುಲಿರ ಸುಬ್ಬಯ್ಯ, ಕುಂಡ್ಯೋಳಂಡ ಸುಬ್ಬಯ್ಯ, ಚಿಯಕಪೂವಂಡ ದೇವಯ್ಯ, ನಾಪನೆರವಂಡ ಸೋಮಯ್ಯ, ಬೊಪ್ಪಂಡ ಬೊಳ್ಳಮ್ಮ ಹಾಗೂ ಬೊಳ್ಳಂಡ ದೇವಯ್ಯ ಅವರುಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಅಂಕೂರ್ ಎಜುಕೇಶನ್ ಟ್ರಸ್ಟ್‍ನ ಅಧ್ಯಕ್ಷ ಕೇಟೋಳಿರ ರಾಜ ಚರ್ಮಣ ಹಾಗೂ ಅಂಕೂರ್ ಪಭ್ಲಿಕ್ ಶಾಲೆಯ ಪ್ರಾಂಶುಪಾಲೆ ಕೇಟೋಳಿರ ರತ್ನ ಚರ್ಮಣ ಅವರನ್ನು ಗೌರವಿಸಲಾಯಿತು.

ಅಕಾಡೆಮಿ ಸದಸ್ಯ ಆಂಗಿರ ಕುಸುಮ್ ನಿರೂಪಿಸಿ, ನಾಳಿಯಮ್ಮಂಡ ಉಮೇಶ್ ಕೇಚಮಯ್ಯ ವಂದಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಚಂಗುಲಂಡ ಸೂರಜ್, ಅಂಚೆಟ್ಟಿರ ಮನು ಮುದ್ದಪ್ಪ, ಅಂಚೆಟ್ಟಿರ ಫ್ಯಾಸ್ಸಿ ಮತ್ತಣ್ಣ, ಬೀಕಚಂಡ ಬೆಳ್ಳಿಯ್ಯಪ್ಪ, ಕುಡಿಯರ ಶಾರದ, ಗಣಪತಿ ಹೆಚ್.ಎ. ಅಜ್ಜಮಾಡ ಕುಶಾಲಪ್ಪ ಹಾಗೂ ಕೊಡವ ಮಕ್ಕಡ ಕೂಟದ ಉಪಾಧ್ಯಕ್ಷ ಬಾಳಿಯಡ ಪ್ರತಿಶ್ ಪೂವಯ್ಯ, ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ, ನಿರ್ದೇಶಕಿ ಬಾಳಿಯಡ ದಿವ್ಯ ಮಂದಪ್ಪ ಸಲಹೆಗಾರ ಕುಲೇಟಿರ ಅಜಿತ್ ಹಾಜರಿದ್ದರು.