ಚೆಟ್ಟಳ್ಳಿ, ಡಿ. 22: ವಿದ್ಯಾರ್ಥಿಗಳಿಗ ಪ್ರತಿಭೆಯನ್ನು ಗುರುತಿಸಲು ಸೂಕ್ತವಾದ ವೇದಿಕೆ ಅತ್ಯವಶ್ಯಕವಾಗಿದೆ ಎಂದು ಕೊಂಡಂಗೇರಿಯ ಹನೀಫ್ ಸಖಾಫಿ ಅಭಿಪ್ರಾಯಪಟ್ಟರು.

ಇಲ್ಲಿನ ಅಸ್ಸಯ್ಯದ್ ಅಬ್ದುಲ್ಲಾಹಿ ಅಸ್ಸಾಖ್ ಪಬ್ಲಿಕ್ ಶಾಲೆಯ ಟ್ಯಾಲೆನ್ಸ್ ಡೇ ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಿ ಮಾತನಾಡಿದರು. ಶಾಲೆಯ ಆಸ್ತಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಹಾಗೂ ಪೋಷಕ ವೃಂದದವ ರಾಗಿದ್ದಾರೆ, ಹೊರತು ದೊಡ್ಡದಾದ ಕಟ್ಟಡಗಳಲ್ಲ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಬಲ್ಲಮಾವಟಿ ಮೆಹಬೂಬ್ ಮಾಸ್ಟರ್, ಇಂದಿನ ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಸಮಾಜದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆಯಬೇಕು. ವಿದ್ಯಾವಂತರೇ ಸಮಾಜದ ಸ್ವಾಸ್ಥ್ಯ ಕೆಡಿಸುವ ಕೆಲಸಗಳಲ್ಲಿ ತೊಡಗಿ ಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ನೈತಿಕ ಶಿಕ್ಷಣದ ಅವಶ್ಯಕತೆಯಿದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಎಜುಕೇಶನ್ ಸೆಂಟರ್ ಅಧ್ಯಕ್ಷ ಅಬ್ದುರಹಮಾನ್ (ಅಂದಾಯಿ) ಅಸ್ಸಯ್ಯದ್ ಅಬ್ದುಲ್ಲಾಹಿ ಸಖಾಫ್ ಎಜುಕೇಶನ್ ಸಂಸ್ಥೆಯು ಬಹಳ ಉತ್ತಮ ರೀತಿಯಲ್ಲಿ ಕಳೆದ 6 ವರ್ಷಗಳಲ್ಲಿ ಕಾರ್ಯಚರಿಸಿಕೊಂಡು ಬರುತ್ತಿರುವದು ಹೆಮ್ಮೆಯ ವಿಷಯವಾಗಿದೆ ಎಂದರು.

ಕಳೆದ ಆರು ವರ್ಷಗಳಲ್ಲಿ ಸಂಸ್ಥೆಗೆ ಹಲವಾರು ಹಿರಿಯರು ಸಹಕಾರ, ಸಲಹೆಗಳನ್ನು ನೀಡಿ ಸಂಸ್ಥೆಯ ಬೆಳವಣಿಗೆಗೆ ಕಾರಣರಾಗಿದ್ದಾರೆ ಎಂದರು. 1-5ನೇ ತರಗತಿಯವರೆಗೆ ಇರುವ ಅಸ್ಸಯ್ಯತ ಅಬ್ದುಲ್ಲಾಹಿ ಅಸ್ಸಾಖಾಫ್ ಶಾಲೆಯು ಮುಂದಿನ ಶೈಕ್ಷಣಿಕ ಸಾಲಿನಿಂದ 6ನೇ ತರಗತಿ ಆರಂಭಗೊಳ್ಳಲಿದ್ದು, ಪೋಷಕರು ತಮ್ಮ ವಿದ್ಯಾರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗೆ ದಾಖಲಿಸಬೇಕು ಎಂದರು.

ಮುಂದಿನ ದಿನಗಳಲ್ಲಿ ಈ ಪಬ್ಲಿಕ್ ಶಾಲೆಯು ಜಿಲ್ಲೆಯ ಎಲ್ಲಾ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಸಾಲಿನಲ್ಲಿ ನಿಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಶಾಲೆಯ ವಾರ್ಷಿಕ ವರದಿಯನ್ನು ಶಾಲಾ ಮುಖ್ಯೋಪಾಧ್ಯಾಯ ಕೃಷ್ಣಪ್ರಸಾದ್ ಮಂಡಿಸಿದರು. ನಂತರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಪೋಷಕರ ಗಮನ ಸೆಳೆದವು.

ವೇದಿಕೆಯಲ್ಲಿ ಡಾ. ಪಿ.ಸಿ. ಹಸೈನಾರ್ ಹಾಜಿ ಸಿದ್ದಾಪುರ, ಕೊಂಡಂಗೇರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ರವಿಕುಮಾರ್, ಯೂಸ್ ಹಾಜಿ, ಮೂಸಾ, ರಾಜ, ಯಹ್‍ಯಾ ಹಾಗೂ ಶಿಕ್ಷಕರು ಇದ್ದರು.