ಪೊನ್ನಂಪೇಟೆ, ಡಿ. 22: ನಿರ್ಮಾಣ ಕಾಮಗಾರಿ ಬಹುತೇಕ ವಾಗಿ ಪೂರ್ಣಗೊಂಡು ಸಾರ್ವಜನಿಕ ಸೇವೆಗೆ ಸಿದ್ಧಗೊಳ್ಳುತ್ತಿರುವ ನೂತನ ನಲ್ಲೂರು ಸೇತುವೆಯ ಸಂಪರ್ಕ ರಸ್ತೆಯ ಮದ್ಯದಲ್ಲಿರುವ ವಿದ್ಯುತ್ ಕಂಬಗಳನ್ನು ಇದುವರೆಗೂ ತೆರವುಗೊಳಿಸದಿರುವ ಕ್ರಮ ಗ್ರಾಮಸ್ಥರ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ಈ ಕುರಿತು ಸಂಬಂಧಿಸಿದ ಇಲಾಖೆಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಗ್ರಾಮಸ್ಥರು, ಕೂಡಲೇ ಸೇತುವೆಯ ಸಂಪರ್ಕ ರಸ್ತೆಯ ಮಧ್ಯದಲ್ಲಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ರಸ್ತೆಯನ್ನು ಸಂಚಾರ ಯೋಗ್ಯ ಗೊಳಿಸುವಂತೆ ಒತ್ತಾಯಿಸಿದ್ದಾರೆ.
ಪೊನ್ನಂಪೇಟೆಯಿಂದ ಕಿರುಗೂರು ಮಾರ್ಗವಾಗಿ ಪೊನ್ನಪ್ಪ ಸಂತೆಗೆ ತೆರಳುವ ರಸ್ತೆಯಲ್ಲಿರುವ ನಲ್ಲೂರು ಗ್ರಾಮದ ಮೂಲಕ ಹರಿಯುವ ಕೀರೆಹೊಳೆಗೆ ಅಡ್ಡಲಾಗಿ ಹಿಂದೆ ನಿರ್ಮಿಸಲಾಗಿದ್ದ ಸೇತುವೆ ಶಿಥಿಲಾವಸ್ಥೆಯಲ್ಲಿದ್ದ ಕಾರಣ ಅದರ ಸಮೀಪದಲ್ಲೇ ಲೋಕೋಪಯೋಗಿ ಇಲಾಖೆಯಿಂದ ರೂ.1.05 ಕೋಟಿ ವೆಚ್ಚದಲ್ಲಿ ನೂತನ ನಲ್ಲೂರು ಸೇತುವೆ ನಿರ್ಮಾಣ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಇದೀಗ ನೂತನ ಸೇತುವೆ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡು ಎರಡೂ ಬದಿಗಳಿಂದಲೂ ಸಂಪರ್ಕ ರಸ್ತೆಯನ್ನು ಜೋಡಿಸಲಾಗಿದೆ. ಆದರೆ ಈ ವೇಳೆ ಬದಿಯೊಂದರಲ್ಲಿ ಈ ಹಿಂದೆಯೇ ಅಳವಡಿಸಲಾಗಿದ್ದ ಪೊನ್ನಂಪೇಟೆ- ಬಾಳೆಲೆ 11 ಕೆ.ವಿ. ವಿದ್ಯುತ್ ಮಾರ್ಗದ ಜೋಡಿ ಕಂಬವಿರುವದು ನೂತನ ಸೇತುವೆಯನ್ನು ಸಾರ್ವಜನಿಕ ಸೇವೆಗೆ ಮುಕ್ತಗೊಳಿಸುವದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದುವರೆಗೂ ಕಂಬಗಳನ್ನು ತೆರವು ಗೊಳಿಸದೇ ಇರುವದರಿಂದ ಕಾಮ ಗಾರಿಯ ಗುತ್ತಿಗೆದಾರರು ಕಂಬಗಳನ್ನು ಮಧ್ಯದಲ್ಲಿರಿಸಿಯೇ ಸಂಪರ್ಕ ರಸ್ತೆಯನ್ನು ಸೇತುವೆಗೆ ಜೋಡಿಸಿದ್ದಾರೆ.
ಸ್ಥಳಕ್ಕೆ ತೆರಳಿದ ‘ಶಕ್ತಿ’ಯೊಂದಿಗೆ ಅಸಮಾಧಾನ ತೋಡಿಕೊಂಡ ನಲ್ಲೂರು ಗ್ರಾಮಸ್ಥರು, ಲೋಕೋಪ ಯೋಗಿ ಇಲಾಖೆ ಮತ್ತು ಸೆಸ್ಕ್‍ನ ಬೇಜವಾಬ್ದಾರಿಯಿಂದ ಈ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಹೀಗಾಗಿಯೇ ಸರಕಾರದ ಕೋಟ್ಯಾಂತರ ವೆಚ್ಚದ ಯೋಜನೆಗಳು ಜನಸಾಮಾನ್ಯರಿಗೆ ಉಪಯೋಗ ವಾಗುತ್ತಿಲ್ಲ ಎಂದು ಆರೋಪಿಸಿ ದರಲ್ಲದೆ, ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೇ ನೇರ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಮಗಾರಿ ಆರಂಭಗೊಳ್ಳುವದಕ್ಕೇ ಮುಂಚಿತವಾಗಿಯೇ ಈ ವಿದ್ಯುತ್ ಕಂಬಗಳನ್ನು ಸಂಬಂಧಿಸಿದವ ರೊಂದಿಗೆ ವ್ಯವಹರಿಸಿ ತೆರವುಗೊಳಿ ಸಬೇಕಿತ್ತು. ಅಲ್ಲದೆ ಯೋಜನಾ ವರದಿಯಲ್ಲೂ ಕಂಬಗಳ ಸ್ಥಳಾಂತರ ಕಾಮಗಾರಿಯನ್ನು ಉಲ್ಲೇಖಿಸಬೇಕಿತ್ತು. ಇದೀಗ ಕಾಮಗಾರಿ ಪೂರ್ಣ ಗೊಂಡರೂ ವಿದ್ಯುತ್ ಕಂಬಗಳು ಅಲ್ಲೇ ಇರುವದು ಯಾವ ನ್ಯಾಯ ಎಂದು ಪ್ರಶ್ನಿಸಿರುವ ಗ್ರಾಮಸ್ಥರು, ಇಲಾಖೆಗಳ ಬೇಜವಾಬ್ದಾರಿಗಳನ್ನು ಪ್ರಶ್ನಿಸಲು ಯಾರೂ ಇಲ್ಲದಂತ ಪರಿಸ್ಥಿತಿ ನಿರ್ಮಾಣಗೊಂಡಿರುವದು ವಿಪರ್ಯಾಸ ಎಂದು ಟೀಕಿಸಿದ್ದಾರೆ. ಮೈಸೂರಿನಿಂದ ಅವರ ಇಚ್ಚೆಯಂತೆ ಬಂದು ಹೋಗುವ ಇಂಜಿನಿಯ ರ್‍ಗಳು ಯಾವದೇ ಕಾಮಗಾರಿಗಳನ್ನು ಮುಕ್ತಾಯಗೊಳಿಸಲು ಇತ್ತೀಚೆಗೆ ಆಸಕ್ತಿ ತೋರುತ್ತಿಲ್ಲ ಎಂದು ನೇರ ಆರೋಪ ಮಾಡಿರುವ ಗ್ರಾಮಸ್ಥರು, ಜಿಲ್ಲಾಧಿಕಾರಿಗಳು ಈ ಬಗ್ಗೆ ಕೂಡಲೇ ಗಮನ ಹರಿಸುವಂತೆ ಆಗ್ರಹಿಸಿದ್ದಾರೆ. ಮುಂದಿನ ಒಂದು ವಾರದೊಳಗಾಗಿ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸ ದಿದ್ದಲ್ಲಿ ಸಂಬಂಧಿಸಿದವರ ವಿರುದ್ಧ ಕಚೇರಿಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುವದು ಅನಿವಾರ್ಯವಾದಿತು ಎಂದು ಎಚ್ಚರಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಥಳದಲ್ಲಿದ್ದ ಯೋಜನೆಯ ಗುತ್ತಿಗೆದಾರ ನವೀನ್ ಅವರು, ಕಾಮಗಾರಿ ಆರಂಭಗೊಂಡಲ್ಲಿಂದಲೇ ಈ ಕಂಬಗಳನ್ನು ತೆರವುಗೊಳಿಸಿ ಕೊಡುವಂತೆ ನಿರಂತರವಾಗಿ ಮನವಿ ಮಾಡಿಯೂ ಸಮಸ್ಯೆ ಪರಿಹಾರ ವಾಗಲಿಲ್ಲ. ಇದೀಗ ವರ್ಷಾಂತ್ಯವಾದ ಮಾರ್ಚ್ ಸಮೀಪಿಸುತ್ತಿರುವದರಿಂದ ಸಹಜವಾಗಿಯೇ ಕಾಮಗಾರಿ ಪೂರ್ಣಗೊಳಿಸುವ ಒತ್ತಡಗಳಿರುತ್ತದೆ. ಈ ಕಾರಣದಿಂದ ಕೆಲಸ ಮುಗಿಸಲು ಆದ್ಯತೆ ನೀಡಲಾಗಿದೆ.
ಸೆಸ್ಕ್ ಸಂಸ್ಥೆಯೇ ವಿದ್ಯುತ್ ಕಂಬಗಳನ್ನು ತೆರವುಗೊಳಿಸ ಬೇಕಿರುವದರಿಂದ ಗುತ್ತಿಗೆದಾರರು ಏನೂ ಮಾಡಲು ಸಾಧ್ಯವಿಲ್ಲ. ಇದೀಗ ನಲ್ಲೂರು ನೂತನ ಸೇತುವೆ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ನೂತನವಾಗಿ ಜೋಡಿಸಲಾದ ಸಂಪರ್ಕ ರಸ್ತೆಗೆ ಡಾಂಬರು ಹಾಕುವ ಕೆಲಸವಷ್ಟೆ ಬಾಕಿ ಉಳಿದಿದೆ.
ಕೂಡಲೇ ಕಂಬಗಳನ್ನು ತೆರವುಗೊಳಿಸಿ ಸಹಕರಿಸಿದರೆ ಡಾಂಬರು ಕೆಲಸ ಪೂರ್ಣಗೊಳಿಸಲು ನೆರವಾಗುತ್ತದೆ ಎಂದು ನವೀನ್ ಅವರು ವಿವರಿಸಿದ್ದಾರೆ.
- ರಫೀಕ್ ತೂಚಮಕೇರಿ